ರೋಹಿಣಿ ಸಿಂಧೂರಿ ಅವರ ಕಿರುಕುಳದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿದ್ದೇನೆ | ಐಎಎಸ್ ಅಧಿಕಾರಿ ಶಿಲ್ಪಾನಾಗ್ ಆರೋಪ
ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕಿರುಕುಳದ ಹಿನ್ನೆಲೆಯಲ್ಲಿ ತಾನು ಮಹಾನಗರ ಪಾಲಿಕೆ ಆಯುಕ್ತೆ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಐಎಎಸ್ ಅಧಿಕಾರಿ ಶಿಲ್ಪಾನಾಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಪಾಲಿಕೆಯಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಬಿಂಬಿಸುತ್ತಿರುವ ಕೆಲಸ ಜಿಲ್ಲಾಧಿಗಳಿಂದ ನಡೆಯುತ್ತಿದೆ. ದಿನ ನಿತ್ಯ ವರದಿಗಳನ್ನು ಪಡೆದು ಅಧಿಕಾರಿಗಳಿಂದ ಹಿಂಸೆ ನೀಡಲಾಗುತ್ತಿದೆ. ಯಾವುದೇ ಜಿಲ್ಲೆಗೆ ಇಂತಹ ಜಿಲ್ಲಾಧಿಕಾರಿ ಸಿಗಬಾರದು ಎಂದು ಅವರು ಆರೋಪಿಸಿದರು.
ಇನ್ನೂ ವೈಯಕ್ತಿಕ ದ್ವೇಷ ಇದ್ದರೆ ತೀರಿಸಿಕೊಳ್ಳಲಿ, ಮೈಸೂರು ನಗರದ ಜನತೆಗೆ ತೊಂದರೆ ಕೊಡುವುದು ಬೇಡ, ಉಸಿರುಗಟ್ಟಿದ ವಾತಾವರಣದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ, ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಆರೋಪಿಸಿದ್ದಾರೆ.
ನನ್ನ ಮೇಲೆ ಹಠ, ಹಗೆತನ ಸಾಧಿಸುತ್ತಿದ್ದಾರೆ, ಇಷ್ಟೊಂದು ತಾಳ್ಮೆ, ಸೌಮ್ಯವಾಗಿರುವ ನನಗೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ನೀನು ಹೋಗು, ಬಾ ಎಂದು ಅಧಿಕಾರಿಗಳನ್ನು ಹೇಳುತ್ತಾರೆ. ತಾನೇ ಸುಪ್ರೀಂ ಎನ್ನುವ ರೀತಿಯಲ್ಲಿ ಮಾತನಾಡುತ್ತಾರೆ ಎಂದು ಅವರು ಆರೋಪಿಸಿದರಲ್ಲದೇ ಕೊವಿಡ್ ತಡೆಗಟ್ಟುವ ವಿಚಾರದಲ್ಲಿ ಯಾವ ರೀತಿ ಕೊವಿಡ್ ನಿಯಂತ್ರಣ ಮಾಡಬೇಕು, ಸಾವು ತಡೆಗಟ್ಟುವುದು ಹೇಗೆ ಎಂಬ ಬಗ್ಗೆ ಯಾವುದೇ ಯೋಜನೆ ರೂಪಿಸುತ್ತಿಲ್ಲ ಎಂದು ಅವರು ಆರೋಪಿಸಿದರು.