ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ: ಖ್ಯಾತ ನಟಿ ನಿಧನ
03/06/2021
ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಮತ್ತೊಂದು ತುಂಬಲಾರದ ನಷ್ಟವಾಗಿದೆ. ಹಿರಿಯ ಪೋಷಕ ನಟಿ, ಹಾಸ್ಯ ನಟಿ, ಬಿ.ಜಯಾ ಅವರು ಇಂದು ನಿಧನರಾಗಿದ್ದಾರೆ.
ಹಾಸ್ಯ ಪಾತ್ರಗಳ ಮೂಲಕ ಎಲ್ಲರನ್ನೂ ನಗಿಸುತ್ತಿದ್ದ ಬಿ.ಜಯ ಅವರು ಧಾರವಾಹಿಗಳಲ್ಲಿ ಕೂಡ ನಟಿಸಿ ಜನರ ಮೆಚ್ಚುಗೆ ಪಡೆದಿದ್ದರು.ಕನ್ನಡ ಚಿತ್ರರಂಗದ ದಿಗ್ಗಜರ ಚಿತ್ರಗಳಲ್ಲಿಯೂ ಬಿ.ಜಯ ಅವರು ನಟಿಸಿದ್ದರು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಜಯಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ಅವರು, ಡಾ.ರಾಜ್ ಕುಮಾರ್ ಅವರ ಹೆಚ್ಚಿನ ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಜಯಾ ಅವರು ನಟಿಸಿದ್ದರು. ಇವರ ನಿಧನದ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.