ಬಹುಜನ ಸಮಾಜ ಪಾರ್ಟಿ(BSP )ಯಿಂದ ಆಟೋ ಚಾಲಕರಿಗೆ ಕಿಟ್ ವಿತರಣೆ
05/06/2021
ಚಿತ್ರದುರ್ಗ: ಬಹುಜನ ಸಮಾಜ ಪಾರ್ಟಿ (BSP) ಚಿತ್ರದುರ್ಗ ಜಿಲ್ಲಾ ಘಟಕ ವತಿಯಿಂದ ಚಿತ್ರದುರ್ಗ ನಗರದ ವಿಜ್ಞಾನ ಕಾಲೇಜ್ ಆವರಣದಲ್ಲಿ ಕೊರೊನಾ ಸಂಕಷ್ಟದಲ್ಲಿ ಸಿಲುಕಿರುವ ಆಟೋ ಚಾಲಕರಿಗೆ ಉಚಿತವಾಗಿ ಆಹಾರದ ಕಿಟ್ ವಿತರಿಸಲಾಯಿತು.
ನಿವೃತ್ತ ತಹಸೀಲ್ದಾರರಾದ ಆರ್. ಕೆ. ಪಾಂಡುರಂಗಯ್ಯ ನವರು ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷರಾದ ಎಸ್. ವೆಂಕಟೇಶ್ ಐಹೊಳೆ, ಜಿಲ್ಲಾ ಸಂಯೋಜಕರಾದ ಮಹಾಂತೇಶ್ ಕೂನಬೇವು, ಮುಖಂಡರಾದ ದಿಲೀಪ್, ಅಂಜಿನಪ್ಪ, ಹನುಮಂತಪ್ಪ, ಮಂಜುನಾಥ್, ಮೈಲಾರಪ್ಪ ಭಾಗವಹಿಸಿದ್ದರು.