ಯುವತಿಯ ಜೊತೆಗೆ ಪ್ರೀತಿ ನಾಟಕವಾಡಿದ ವಿವಾಹಿತ; ವಿಷಯ ತಿಳಿದ ಯುವತಿಯಿಂದ ಆತ್ಮಹತ್ಯೆ - Mahanayaka
5:14 PM Thursday 12 - December 2024

ಯುವತಿಯ ಜೊತೆಗೆ ಪ್ರೀತಿ ನಾಟಕವಾಡಿದ ವಿವಾಹಿತ; ವಿಷಯ ತಿಳಿದ ಯುವತಿಯಿಂದ ಆತ್ಮಹತ್ಯೆ

davanagere news
06/06/2021

ದಾವಣಗೆರೆ:  ವಿವಾಹಿತ ಪುರುಷನೋರ್ವನ  ವಂಚನೆಯ ಪ್ರೀತಿಯಿಂದ ನೊಂದು ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ  ದಾವಣಗೆರೆ ಭರತ್ ಕಾಲೋನಿಯಲ್ಲಿ ನಡೆದಿದೆ.

ಬ್ಯುಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯು ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದ ಈರಣ್ಣ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ, ಈ ಈರಣ್ಣ ಎಂಬಾತನಿಗೆ ಇದಕ್ಕೂ ಮೊದಲೇ ಮದುವೆಯಾಗಿತ್ತು.  ಈ ವಿಚಾರವನ್ನು ಮುಚ್ಚಿಟ್ಟು ಈರಣ್ಣ ಯುವತಿಗೆ ಮೋಸ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದು, ಇದರಿಂದ ನೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಈರಣ್ಣನೇ ಕಾರಣ ಎಂದು ಯುವತಿ ಆತ್ಮಹತ್ಯೆಗೂ ಮೊದಲು ಸೆಲ್ಫಿ ವಿಡಿಯೋ ಮಾಡಿದ್ದಾಳೆ.

ನನ್ನ ಜೊತೆಗೆ ಪ್ರೀತಿಯ ನಾಟಕವಾಡಿ ನನಗೆ ಈರಣ್ಣ ಮೋಸ ಮಾಡಿದ್ದಾನೆ. ನನ್ನ ಸಾವಿಗೆ ಈರಣ್ಣನೇ ಕಾರಣ  ಆತನಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಯುವತಿ ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಘಟನಾ ಸ್ಥಳಕ್ಕೆ ಆರ್ ಎಂಸಿ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ