ಪರಿಸರ ದಿನದಂದು ಗಾಂಜಾ ಗಿಡ ನೆಟ್ಟು ಫೋಟೋಗೆ ಪೋಸ್ ನೀಡಿದ ಯುವಕರು!
09/06/2021
ತಿರುವನಂತಪುರಂ: ವಿಶ್ವ ಪರಿಸರ ದಿನವನ್ನು ಕಿಡಿಗೇಡಿಗಳ ಗುಂಪೊಂದು ಗಾಂಜಾ ಗಿಡ ನೆಡುವ ಮೂಲಕ ಆಚರಿಸಿದ ಘಟನೆ ಕೇರಳದಲ್ಲಿ ನಡೆದಿದ್ದು, ನಾವು ಇಷ್ಟಪಡುವ ಗಿಡ ಇದಾಗಿರುವುದರಿಂದ ಅದನ್ನೇ ನೆಟ್ಟಿದ್ದೇವೆ ಎಂದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಈ ಚಿತ್ರ ಕೇರಳದಾದ್ಯಂತ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಅಬಕಾರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಈ ವೇಳೆ 60 ಸೆಂ.ಮೀ.ನಷ್ಟು ಉದ್ದದ ಹಲವು ಗಿಡಗಳನ್ನು ಬೆಳೆಸಿರುವುದು ಕಂಡು ಬಂದಿದೆ. ತಕ್ಷಣವೇ ಆ ಗಿಡಗಳನ್ನು ನಾಶ ಮಾಡಲಾಗಿದೆ.
ಪರಿಸರ ದಿನಾಚರಣೆ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಗಾಂಜಾ ಗಿಡವನ್ನು ನೆಟ್ಟು ಫೋಟೋಗೆ ರಾಜಾರೋಷವಾಗಿ ಫೋಟೋಗೆ ಪೋಸು ನೀಡಿರುವ ತಂಡವನ್ನು ಪತ್ತೆ ಹಚ್ಚಲು ಪೊಲೀಸು ಶೋಧ ನಡೆಸುತ್ತಿದ್ದಾರೆ. ಆದರೆ ಈವರೆಗೆ ಆರೋಪಿಗಳ ಪತ್ತೆಯಾಗಿಲ್ಲ ಎಂದ ಸರ್ಕಲ್ ಇನ್ಸ್ ಪೆಕ್ಟರ್ ನೌಷಾದ್ ತಿಳಿಸಿದ್ದಾರೆ.