ನಳಿನ್ ಕುಮಾರ್ ಕಟೀಲ್ ಸಂದರ್ಶನದ ಆಡಿಯೋ ತಿರುಚಿದ ಯುವಕ ಬಂಧನ | ಟ್ರೋಲ್ ಪೇಜ್ ಅಡ್ಮೀನ್ ಗಳೇ ಎಚ್ಚರ!
ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಂದರ್ಶನದ ಆಡಿಯೋ ತಿರುಚಿದ ಆರೋಪದಲ್ಲಿ ಯುವಕನೋರ್ವನನ್ನು ಬಂಧಿಸಲಾಗಿದ್ದು, ಸ್ಥಳೀಯ ಖಾಸಗಿ ಕೇಬಲ್ ಟಿವಿಯ ಸಂದರ್ಶನದಲ್ಲಿ ನಳಿನ್ ಕುಮಾರ್ ಕಟೀಲ್ ಭಾಗವಹಿಸಿದ್ದ ಕಾರ್ಯಕ್ರಮದ ಆಡಿಯೋವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಲಾಗಿತ್ತು.
ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಂದರ್ಶನದಲ್ಲಿದ್ದ ಸಂದರ್ಭದಲ್ಲಿ ಚಿಕ್ಕಮಗಳೂರಿನ ಯುವತಿಯೋರ್ವಳು ಕರೆ ಮಾಡಿದ್ದು, ಈ ಆಡಿಯೋವನ್ನು ತಿರುಚಿ, ನಳಿನ್ ಕುಮಾರ್ ಕಟೀಲ್ ಗೆ ಹೀನಾಯವಾಗಿ ಬೈಯ್ಯುವಂತೆ ಆಡಿಯೋವನ್ನು ತಿರುಚಲಾಗಿದೆ ಎಂದ ಆರೋಪಿಸಲಾಗಿದೆ.
ಇನ್ನೂ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಿದೆ. ಸುನೀಲ್ ಬಜಿಲಕೇರಿ ಎಂಬ ಯುವಕ ಈ ಆಡಿಯೋವನ್ನು ತಿರುಚಿದ್ದು, ಟ್ರೋಲ್ ಮಾಡುವ ಪ್ರಯತ್ನದಲ್ಲಿ ಸುನೀಲ್ ವಿಫಲವಾಗಿದ್ದು, ಇದು ಆಡಿಯೋ ತಿರುಚಿದ ಪ್ರಕರಣವಾಗಿ ಬದಲಾಗಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿದೆ.
ಮಂಗಳೂರಿನಲ್ಲಿ ನಳಿನ್ ಕುಮಾರ್ ಕಟೀಲ್ ಅವರಿಗೆ ಸಂಬಂಧಿಸಿದಂತೆ ಹಲವಾರು ಟ್ರೋಲ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುತ್ತದೆ. ಪಂಪ್ ವೆಲ್ ಮೇಲ್ಸೇತುವೆ ವಿಳಂಬದ ಬಗ್ಗೆ ಸಾಲು ಸಾಲು ಟ್ರೋಲ್ ಗಳು ಬಂದಿದ್ದವು. ಇದಾದ ಬಳಿಕ ಇತ್ತೀಚೆಗೆ ಪಂಪ್ ವೇಲ್ ಸೇತುವೆ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ಟ್ರೋಲ್ ಗಳು ಬಂದಿದ್ದವು. ಆದರೆ, ಸುನೀಲ್ ಎಂಬ ಯುವಕ ಆಡಿಯೋವನ್ನು ತಿರುಚುವ ಮೂಲಕ ಇದೀಗ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ.
ಈ ಪ್ರಕರಣಕ್ಕೆ ಹಿಂದೆ ಚಾನೆಲ್ ಗೆ ಕರೆ ಮಾಡಿದ್ದ ಯುವತಿಯ ಬಳಿಯಲ್ಲಿ ಕೂಡ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಯ ಮೊಬೈಲ್ ನ್ನು ಸೈಬರ್ ಲ್ಯಾಬ್ ಗೆ ಕಳುಹಿಸಲಾಗಿದೆ. ಇನ್ನಷ್ಟು ತನಿಖೆಯನ್ನು ಆರೋಪಿಯ ವಿರುದ್ಧ ಪೊಲೀಸರು ನಡೆಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಕೆಲಸಗಳನ್ನು ಮಾಡುವಾಗ ಯುವ ಜನರು ಬಹಳಷ್ಟು ಎಚ್ಚರವಹಿಸಬೇಕು. ಕೆಲವೊಮ್ಮೆ ಎಲ್ಲಿಂದ ಕೆಲಸ ಸಿಗುತ್ತದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. ಟ್ರೂಲ್ ಪೇಜ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡುವ ಹವ್ಯಾಸಿಗಳು ಕಾನೂನಿನ ಪರೀಧಿಯಲ್ಲಿ ನಡೆದುಕೊಳ್ಳುವುದು ಉತ್ತಮ ಎನ್ನುವ ಚರ್ಚೆಗಳು ಈ ಘಟನೆಯ ಬೆನ್ನಲ್ಲೇ ಚರ್ಚೆಯಲ್ಲಿದೆ.