ಆಯಿಷಾ ಸುಲ್ತಾನ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದಕ್ಕೆ 15 ಬಿಜೆಪಿ ಮುಖಂಡರಿಂದ ರಾಜೀನಾಮೆ
ಲಕ್ಷದ್ವೀಪ: ಸಿನಿಮಾ ನಿರ್ಮಾಪಕಿಯ ವಿರುದ್ಧ ದಾಖಲಾಗಿರುವ ದೇಶ ವಿರೋಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ಕ್ರಮವನ್ನು ಖಂಡಿಸಿ 15 ಬಿಜೆಪಿ ನಾಯಕರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
ಸಿನಿಮಾ ನಿರ್ಮಾಪಕಿ ಆಯೇಷಾ ಸುಲ್ತಾನ್ ಮಲಯಾಳಂ ಸುದ್ದಿ ವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಲಕ್ಷದ್ವೀಪದಲ್ಲಿ ಕೊವಿಡ್ ಹರಡಲು ಕೇಂದ್ರ ಸರ್ಕಾರವು ಜೈವಿಕ ಅಸ್ತ್ರಗಳನ್ನು ಬಳಸಿದೆ ಎಂದಿ ಗಂಭೀರವಾದ ಆರೋಪ ಮಾಡಿದ್ದರು.
ಈ ಹೇಳಿಕೆಯ ವಿರುದ್ಧ ಕೆಲವು ಬಿಜೆಪಿ ಮುಖಂಡರು, ಆಯೇಷಾ ದೇಶ ವಿರೋಧಿ ಕೃತ್ಯ ಎಸಗಿದ್ದಾರೆ ಎಂದು ದೂರಿದ್ದಾರೆ. ಕೇಂದ್ರಾಡಳಿಯ ಪ್ರದೇಶದಲ್ಲಿ ಕೊವಿಡ್ 19 ಬಗ್ಗೆ ಸುಳ್ಳು ಸುದ್ದಿ ಹರಡಿದ್ದಾರೆ ಎಂದು ದೂರು ನೀಡಿದ್ದು, ಈ ದೂರಿನನ್ವಯ ಲಕ್ಷದ್ವೀಪ ಪೊಲೀಸರು ಆಯೇಷಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಳಿಸಿಕೊಂಡಿದ್ದಾರೆ.
ಆಯೇಷಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಳಿಸಿರುವುದಕ್ಕೆ ಬಿಜೆಪಿಯೊಳಗೆಯೇ ಅಸಮಾಧಾನ ಸೃಷ್ಟಿಯಾಗಿದ್ದು, ಶುಕ್ರವಾರ 15ಕ್ಕೂ ಅಧಿಕ ಬಿಜೆಪಿ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿ ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರ ದ್ವೇಷದ ಕ್ರಮವನ್ನು ಖಂಡಿಸಿ 8 ಬಿಜೆಪಿ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಇದೀಗ 15 ಮಂದಿ ಬಿಜೆಪಿ ನಾಯಕರು ರಾಜೀನಾಮೆ ನೀಡಿದ್ದಾರೆ.