ತಾಯಿ ಇಲ್ಲದ ವೇಳೆಯಲ್ಲಿ ಸ್ವಂತ ಮಗಳ ಮೇಲೆಯೇ ತಂದೆಯಿಂದ ಅತ್ಯಾಚಾರ! | ಮಗುವಿಗೆ ಜನ್ಮ ನೀಡಿದ ಮಗಳು - Mahanayaka

ತಾಯಿ ಇಲ್ಲದ ವೇಳೆಯಲ್ಲಿ ಸ್ವಂತ ಮಗಳ ಮೇಲೆಯೇ ತಂದೆಯಿಂದ ಅತ್ಯಾಚಾರ! | ಮಗುವಿಗೆ ಜನ್ಮ ನೀಡಿದ ಮಗಳು

ahmadabad
13/06/2021

ಅಹ್ಮದಾಬಾದ್:  19 ವರ್ಷದ  ತನ್ನ ಮಗಳನ್ನೇ ತಂದೆ ನಿರಂತರವಾಗಿ ಅತ್ಯಾಚಾರ ಮಾಡಿರುವ ಘಟನೆ ನಡೆದಿದ್ದು, ಇದರ ಪರಿಣಾಮ ಸಂತ್ರಸ್ತ ಮಗಳು ಗರ್ಭಿಣಿಯಾಗಿದ್ದು,  ಗುಜರಾತ್ ನ ಅಹ್ಮದಾಬಾದ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಅನಾರೋಗ್ಯದ ಕಾರಣ ಮಗಳು ಆಸ್ಪತ್ರೆಗೆ ಹೋಗಿದ್ದು, ಈ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಸಂದರ್ಭ ಆಕೆಯನ್ನು ವಿಚಾರಿಸಿದಾಗ ತಂದೆಯೇ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ತಿಳಿಸಿದ್ದಾಳೆ.

ತಾಯಿ ಇಲ್ಲದ ಸಂದರ್ಭಗಳಲ್ಲಿ ಹಾಗೂ ತಾಯಿ ನಿದ್ರಿಸುತ್ತಿದ್ದ ಸಂದರ್ಭಗಳಲ್ಲಿ ತಂದೆ ಹಲವಾರು ಬಾರಿ ಅತ್ಯಾಚಾರ ನಡೆಸಿದ್ದಾನೆ ಎಂದು ಪುತ್ರಿ ಹೇಳಿದ್ದಾಳೆ. ಆರೋಪಿಗೆ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದರು. ಈ ಪೈಕಿ ಮೂವರು ಗಂಡು ಮಕ್ಕಳು ಹಾಗೂ ಓರ್ವಳು ಹೆಣ್ಣು ಮಗಳಿಗೆ ಮದುವೆಯಾಗಿದ್ದು, ಅವರು ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತಿದ್ದರು.

ಆರೋಪಿ ತಂದೆ ತನ್ನ ಪತ್ನಿ ಮತ್ತು ಮಗಳೊಂದಿಗೆ ವಾಸಿಸುತ್ತಿದ್ದ. ಪತ್ನಿ ಇಲ್ಲದ ಸಂದರ್ಭಗಳಲ್ಲಿ ಹಾಗೂ ಪತ್ನಿ ನಿದ್ರಿಸುತ್ತಿದ್ದ ವೇಳೆಯಲ್ಲಿ ತನ್ನ ಮಗಳನ್ನೇ ಆತ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂದು ವರದಿಯಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ