ಗಂಡು ಮಗುವಿಗೆ ಜನ್ಮ ನೀಡಿದ ಅಂಗಾಂಗ ಕಸಿಗೆ ಒಳಗಾಗಿದ್ದ ಮಹಿಳೆ | ವೈದ್ಯಲೋಕದ ಹೊಸ ಸಾಧನೆ - Mahanayaka
12:35 AM Wednesday 5 - February 2025

ಗಂಡು ಮಗುವಿಗೆ ಜನ್ಮ ನೀಡಿದ ಅಂಗಾಂಗ ಕಸಿಗೆ ಒಳಗಾಗಿದ್ದ ಮಹಿಳೆ | ವೈದ್ಯಲೋಕದ ಹೊಸ ಸಾಧನೆ

anganga kasi
15/06/2021

ಮೈಸೂರು: ಅಂಗಾಂಗ ಕಸಿಗೆ ಒಳಗಾಗಿದ್ದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದು, ಇದು ದೇಶದಲ್ಲೇ ಮೊದಲ ಪ್ರಕರಣವಾಗಿದ್ದು,  ಅಪೊಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಮಹಿಳೆಗೆ ಹೆರಿಗೆ ಆಗಿದ್ದು, ಈ ಪ್ರಕರಣ ಅಂಗಾಂಗ ವೈಫಲ್ಯದಿಂದ ಬಳಲುವವರಿಗೆ ಒಂದು ಭರವಸೆಯಾಗಿದೆ.

ಬಾಲ್ಯದಿಂದಲೇ ಮಧುಮೇಹಕ್ಕೆ ಒಳಗಾಗಿದ್ದ ಮಹಿಳೆ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಇವರಿಗೆ 3 ವರ್ಷಗಳ ಹಿಂದೆ ಏಕಕಾಲಕ್ಕೆ ಮೇದೋಜಿರಕ ಹಾಗೂ ಮೂತ್ರಪಿಂಡಗಳನ್ನು ಕಸಿ ಮಾಡಲಾಗಿತ್ತು.

ಅಂಗಾಂಗ ಕಸಿಯಾಗಿದ್ದರೂ ಸಹ ಇಂದು ಅವರಿಗೆ ಹೆರಿಗೆಯಾಗಿದ್ದು, ಈ ಮೂಲಕ ವೈದ್ಯಲೋಕ ಮತ್ತೊಂದು ಸಾಧನೆ ಮಾಡಿದೆ. . ಕಸಿ ಶಸ್ತ್ರ ಚಿಕಿತ್ಸಕ ಕನ್ಸಲ್ಟೆಂಟ್ ಡಾ.ಸುರೇಶ್ ರಾಘವಯ್ಯ, ಸ್ತ್ರೀ ರೋಗ ತಜ್ಞರಾದ ಡಾ.ಬಿ.ಪಿ. ಅಂಜಲಿ, ಅರವಳಿಕೆ ತಜ್ಞರಾದ ಡಾ.ಅಂದಿತಾ ಮುಖರ್ಜಿ ಈ ಚಿಕಿತ್ಸಾ ತಂಡದಲ್ಲಿದ್ದರು.

ಇತ್ತೀಚಿನ ಸುದ್ದಿ