“ದೇವರು ನಿನಗೆ ತಾಳಿ ಕಟ್ಟಲು ಹೇಳಿದ್ದಾನೆ” ಎಂದು ಅಪ್ರಾಪ್ತೆಗೆ ತಾಳಿ ಕಟ್ಟಿದ  ಬ್ರದರ್! - Mahanayaka

“ದೇವರು ನಿನಗೆ ತಾಳಿ ಕಟ್ಟಲು ಹೇಳಿದ್ದಾನೆ” ಎಂದು ಅಪ್ರಾಪ್ತೆಗೆ ತಾಳಿ ಕಟ್ಟಿದ  ಬ್ರದರ್!

church brother
20/06/2021

ಬಳ್ಳಾರಿ: “ದೇವರು ನಿನಗೆ ತಾಳಿ ಕಟ್ಟಲು ಹೇಳಿದ್ದಾನೆ” ಎಂದು  ಅಪ್ರಾಪ್ತ ವಯಸ್ಸಿನ ಬಾಲಕಿಗೆ ಚರ್ಚ್ ಬ್ರದರ್ ತಾಳಿ ಕಟ್ಟಿದ ಘಟನೆ ನಡೆದಿದ್ದು, ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ  ಆರೋಪಿ ಬ್ರದರ್ ತಲೆ ಮರೆಸಿಕೊಂಡಿದ್ದಾನೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನಿಂದ ಈ ಘಟನೆ ವರದಿಯಾಗಿದ್ದು, ತಾಯಿಯ ಜೊತೆಗೆ ಪ್ರಾರ್ಥನೆಗೆ ಬಂದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯ ಬಳಿಗೆ ಬಂದಿದ್ದ ಚರ್ಚ್ ಬ್ರದರ್ ಜಾನಪ್ಪ ಎಂಬಾತ, ದೇವರು ನಿನಗೆ ತಾಳಿ ಕಟ್ಟು ಎಂದು ಆಜ್ಞೆ ಮಾಡಿದ್ದಾನೆ. ಹೀಗಾಗಿ  ನಿನಗೆ ತಾಳಿಕಟ್ಟುತ್ತಿದ್ದೇನೆ ಎಂದು ತಾಳಿ ಕಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.

ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು,  ತಡವಾಗಿ ಬೆಳಕಿಗೆ ಬಂದಿದೆ. ತಾಯಿ ಮತ್ತು ಮಗಳು ಚರ್ಚ್ ನಿಂದ ಊರಿಗೆ ಮರಳಿದ ಬಳಿಕ ಗ್ರಾಮಸ್ಥರಲ್ಲಿ ಈ ಬಗ್ಗೆ ಹೇಳಿದ್ದು,  ಗ್ರಾಮಸ್ಥರು ಕೂಡಲೇ ತಾಲೂಕಿನ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸದ್ಯ ಆರೋಪಿ ಜಾನಪ್ಪನ ವಿರುದ್ಧ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಬಳಿಕ ಜಾನಪ್ಪ ತಲೆಮರೆಸಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ