“ಡಿಜಿಟಲ್ ಮಾಧ್ಯಮದ ಮೂಲಕ ಮನೆಯಲ್ಲಿಯೇ ಯೋಗ ದಿನ ಆಚರಿಸಿ”  - Mahanayaka

“ಡಿಜಿಟಲ್ ಮಾಧ್ಯಮದ ಮೂಲಕ ಮನೆಯಲ್ಲಿಯೇ ಯೋಗ ದಿನ ಆಚರಿಸಿ” 

common yoga
20/06/2021

ಚಿಕ್ಕಬಳ್ಳಾಪುರ: 7ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆಯುಷ್ ಇಲಾಖೆಯ ಸಹಯೋಗದೊಂದಿಗೆ ಡಿಜಿಟಲ್ ಮಾಧ್ಯಮದ ಮುಖಾಂತರ ಅತೀ ಸರಳವಾಗಿ ಮತ್ತು ಸಾಂಕೇತಿಕವಾಗಿ ಆಚರಿಸಲಾಗುವುದು ಎಂದು ಜಿಲ್ಲಾ ಆಯೂಷ್ ಅಧಿಕಾರಿ ತಬೀಬಾ ಬಾನು ಅವರು ತಿಳಿಸಿದ್ದಾರೆ.


Provided by

ಜೂನ್ 21 ರಂದು  ಜಿಲ್ಲಾಡಳಿತ ಭವನದ ಆಡಿಟೊರಿಯಂನಲ್ಲಿ  ಬೆಳಿಗ್ಗೆ 6-50 ಕ್ಕೆ ಡಿಜಿಟಲ್ ಮಾಧ್ಯಮದ ಮುಖಾಂತರ ದೀಪ ಬೆಳಗುವ ಮೂಲಕ  ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಕೆಲವು ಜಿಲ್ಲಾ ಮಟ್ಟದ ಅಧಿಕಾರಿಗಳು ಸಾಂಕೇತಿಕವಾಗಿ ಯೋಗಾಭ್ಯಾಸವನ್ನು ನಡೆಸಲಿದ್ದಾರೆ. “ಯೋಗಾಭ್ಯಾಸದೊಂದಿಗೆ ಇರಿ! ಮನೆಯಲ್ಲಿಯೇ ಇರಿ!” ಎಂಬ ಧ್ಯೇಯವಾಕ್ಯದೊಂದಿಗೆ ಸಾರ್ವಜನಿಕರು ತಮ್ಮ ನಿವಾಸ ಸ್ಥಾನದಲ್ಲಿಯೇ ಯೋಗಾಭ್ಯಾಸದಲ್ಲಿ ತೊಡಗಿ ತದನಂತರ ಸರ್ಕಾರದ ವಿವಿಧ ಲಿಂಕ್  ಗಳ ಮುಖಾಂತರ ತಮ್ಮ ಭಾಗವಹಿಸುವಿಕೆಯನ್ನು ಆಯುಷ್ ಇಲಾಖೆ, ಚಿಕ್ಕಬಳ್ಳಾಪುರ ರವರ ಇ-ಮೇಲ್ ಮತ್ತು ದೃಶ್ಯ ಮಾಧ್ಯಮಗಳಿಗೆ ಅಪ್ಲೋಮಡ್ ಮಾಡಬಹುದು ಎಂದು ಮಾಹಿತಿ ನೀಡಿದರು.

ಯೋಗ ದಿನಾಚರಣೆಯ ಪೂರ್ವಭಾವಿಯಾಗಿ  Common Yoga Protocol- https://www.youtube.com/watch?v=K5W4sRTErcs Sample videos – https://tinyurl.com/tapefKxz ಲಿಂಕ್  ಗಳ  ಮುಖಾಂತರ ಸಾರ್ವಜನಿಕರು ಯೋಗ ತರಗತಿಗಳಲ್ಲಿ ಭಾಗವಹಿಸಬಹುದಾಗಿದೆ.


Provided by

ಅಲ್ಲದೇidychikkaballapur@gmail.comhttps://www.facebook.com/moayush/,https://twitter.com/moayush/,

https://www.instragram.com/ministryofayush/?h1=en,https://main.ayush.gov. ಮತ್ತು https://forms.gle/vSkXH77RTvSjWbok7 ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಬಹುದಾಗಿದೆ ಎಂದು  ಜಿಲ್ಲಾ ಆಯೂಷ್ ಅಧಿಕಾರಿ  ತಬೀಬಾ ಬಾನು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ