NEET ಹಿಂದುಳಿದ  ಸಮುದಾಯ ಮತ್ತು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ | ನಟ ಸೂರ್ಯ - Mahanayaka

NEET ಹಿಂದುಳಿದ  ಸಮುದಾಯ ಮತ್ತು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ | ನಟ ಸೂರ್ಯ

surya
21/06/2021

ಚೆನ್ನೈ: ವಿದ್ಯಾರ್ಥಿಗಳಿಗೆ  ಅರ್ಹತಾ ಪ್ರವೇಶ ಪರೀಕ್ಷೆ(NEET) ಒಂದು ಬೆದರಿಕೆಯಾಗಿದೆ ಎಂದು ತಮಿಳುನಟ ಸೂರ್ಯ ಟ್ವೀಟ್ ಮಾಡಿದ್ದು,  ಶಿಕ್ಷಣವು ರಾಜ್ಯಗಳ ಜವಾಬ್ದಾರಿ ಮತ್ತು ಹಕ್ಕಾಗಿರಬೇಕು ಎಂದು ಅವರು ಹೇಳಿದ್ದಾರೆ.

ನೀಟ್ ನಿಂದಾಗಿ ಹಿಂದುಳಿದ ಸಮುದಾಯಗಳ ಮತ್ತು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಾನಿಯಾಗುತ್ತದೆ ಎಂದು ಸೂರ್ಯ ಪತ್ರಬರೆದಿದ್ದಾರೆ. ಶಿಕ್ಷಣ ಎನ್ನುವುದು ರಾಜ್ಯಗಳ ಜವಾಬ್ದಾರಿಯಾಗಿರಬೇಕು. ಭಾರತದಂತಹ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯು ರಾಜ್ಯಗಳ ಕೈಯಲ್ಲಿದ್ದರೆ ಮಾತ್ರವೇ ನ್ಯಾಯ ಎಂದು ಅವರು ಹೇಳಿದ್ದಾರೆ.

ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳು ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಶಿಕ್ಷಣದ ಏಕೈಕ ಸಮರ್ಥ ಮೂಲವಾಗಿದೆ. ಶೇ 40% ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ ಮತ್ತು 25% ವಿದ್ಯಾರ್ಥಿಗಳು ತಮಿಳುನಾಡಿನ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿದ್ದಾರೆ. ಅದರಲ್ಲಿ ಕೇವಲ 20% ವಿದ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣವನ್ನು ಪಡೆಯುತ್ತಾರೆಂದು ಸೂರ್ಯ ತಿಳಿಸಿದ್ದಾರೆ.

ನೀಟ್‌ ನಂತಹ ಸಾಮಾನ್ಯ ಪರೀಕ್ಷೆಗಳು ಹಿಂದುಳಿದ ಮತ್ತು ಸರ್ಕಾರಿ ಶಾಲೆಗಳಿಂದ ಉತ್ತಮ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳನ್ನು ವಂಚಿತಗೊಳಿಸುತ್ತವೆ. ವೈದ್ಯರಾಗಬೇಕೆಂದು ಕನಸು ಕಾಣುವ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳು ನೀಟ್ ಅನುಷ್ಠಾನದಿಂದ ತೀವ್ರವಾಗಿ ದುರ್ಬಲರಾಗುತ್ತಾರೆ ಎಂದು ಸೂರ್ಯ ಹೇಳಿದ್ದಾರೆ.

ನೀಟ್‌ನ ಪ್ರಭಾವದ ಬಗ್ಗೆ ತನಿಖೆ ನಡೆಸುತ್ತಿರುವ ಉನ್ನತ ಮಟ್ಟದ ಸಮಿತಿಯು ನೀಟ್‌ ಪ್ರವೇಶದ ಬಗ್ಗೆ ತಮ್ಮ ಅಭಿಪ್ರಾಯವನ್ನು neetimpact2021@gmail.com ಗೆ ಬರೆಯಲು ಸಾರ್ವಜನಿಕರನ್ನು ಆಹ್ವಾನಿಸಿದೆ. ಈ ನಿಟ್ಟಿನಲ್ಲಿ ಸೂರ್ಯ ಪತ್ರ ಬರೆದಿದ್ದಾರೆ.

 

ಸೊಪ್ಪು ತರಕಾರಿಗೆ ಕಾಲಿನಿಂದ ಒದ್ದು ಬಡವರ ಮೇಲೆ ದರ್ಪ ತೋರಿದ ಪೊಲೀಸ್ ಅಧಿಕಾರಿ

ಇತ್ತೀಚಿನ ಸುದ್ದಿ