ಮಹಾ ಬೋಧಿ ಸೊಸೈಟಿ ವತಿಯಿಂದ ಮಂಗಳೂರಿನಲ್ಲಿ ಕಿಟ್ ವಿತರಣೆ - Mahanayaka
12:17 AM Thursday 12 - December 2024

ಮಹಾ ಬೋಧಿ ಸೊಸೈಟಿ ವತಿಯಿಂದ ಮಂಗಳೂರಿನಲ್ಲಿ ಕಿಟ್ ವಿತರಣೆ

maha bodi society
21/06/2021

ಮಂಗಳೂರು: ಪರಮಪೂಜ್ಯ ಆಚಾರ್ಯ ಬುದ್ದ ರಕ್ಖಿತ ಮಹಾತೇರರ ಜನ್ಮದಿನದ ಶತಮಾನೋತ್ಸವದ ಅಂಗವಾಗಿ ಮಹಾ ಬೋಧಿ ಸೊಸೈಟಿ ಬೆಂಗಳೂರು ವತಿಯಿಂದ ಮಂಗಳೂರಿನ ಹಳ್ಳಿಗಳಲ್ಲಿ ಆಹಾರ ಕಿಟ್ ಗಳನ್ನು ನೀಡಲಾಯಿತು.

ಕೊವಿಡ್ 19 ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಮಹಾ ಬೋಧಿ ಸೊಸೈಟಿಯಿಂದ ಅಕ್ಕಿ ಹಾಗೂ ದಿನಬಳಕೆಯ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಆಚಾರ್ಯ ಬುದ್ದ ರಕ್ಖಿತ ಮಹಾತೇರರ ಜನ್ಮ ದಿನಾಚರಣೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಿಟ್ ಗಳನ್ನು  ಪೇಜಾವರ, ಕರಂಬರ್, ಮುತ್ತೂರು ಪ್ರದೇಶಗಳಲ್ಲಿ ನೀಡಲಾಯಿತು. ದಕ್ಷಿಣ ಕನ್ನಡ  ಬೌದ್ಧ ಮಹಾಸಭಾ ಪ್ರಮುಖರು  ಈ ಸಂದರ್ಭ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ