ಪ್ರೇಮಿಗಳನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿದ ಯುವತಿಯ ತಂದೆ!
ವಿಜಯಪುರ: ತನ್ನ ಮಗಳು ಹಾಗೂ ಆಕೆಯ ಪ್ರಿಯಕರನನ್ನು ಹುಡುಗಿಯ ತಂದೆ ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ದೇವರ ಹಿಪ್ಪರಗಿ ತಾಲೂಕಿನ ಸಲಾದಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಬಸವರಾಜ ಬಡಿಗೇರಿ ಹಾಗೂ ಖಾನಾಪುರ ಗ್ರಾಮದ 18 ವರ್ಷ ವಯಸ್ಸಿನ ಯುವತಿ ಹತ್ಯೆಗೀಡಾದವರಾಗಿದ್ದು, ಈ ಇಬ್ಬರು ಕೂಡ ಬೇರೆ ಬೇರೆ ಸಮುದಾಯದವರಾಗಿದ್ದರು. ಈ ಕಾರಣಕ್ಕಾಗಿ ಇವರ ಪ್ರೀತಿಗೆ ಮನೆಯವರ ವಿರೋಧ ಇತ್ತು ಎನ್ನಲಾಗಿದೆ.
ಇನ್ನೂ ಬೇರೆ ಸಮುದಾಯದ ಯುವಕನೊಂದಿಗೆ ತನ್ನ ಮಗಳು ಇರುವುದನ್ನು ಕಂಡ ತಂದೆ ಕೋಪದ ಕೈಗೆ ಬುದ್ಧಿಯನ್ನು ನೀಡಿದ್ದು, ತನ್ನ ಮಗಳು ಹಾಗೂ ಯುವಕನನ್ನು ಹೊಡೆದು, ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದಾನೆ.
ಜಾತಿ, ಧರ್ಮದ ವಿಚಾರದಲ್ಲಿ ಪ್ರೇಮಿಗಳ ಹತ್ಯೆ ಬಹಳಷ್ಟು ನಡೆಯುತ್ತಲೇ ಇವೆ. ಇದಕ್ಕೆ ಮರ್ಯಾದಾ ಹತ್ಯೆ ಎನ್ನುವ ಹೆಸರನ್ನು ಕೂಡ ಇಟ್ಟುಕೊಂಡು ಅದನ್ನು ವೈಭವೀಕರಿಸಲಾಗುತ್ತಿದೆ. ಇನ್ನೊಂದು ಕಡೆಯಲ್ಲಿ ಇಂತಹ ಘಟನೆಗಳನ್ನು ಬೆಂಬಲಿಸುವವರು ಕೂಡ ಇದ್ದಾರೆ. ಪ್ರಾಣಿಗಳು ಕೂಡ ಈ ಪ್ರಪಂಚದಲ್ಲಿ ತನ್ನ ಸಹ ಪ್ರಾಣಿಯನ್ನು ಪ್ರೀತಿಸಲು ಸ್ವತಂತ್ರವಾಗಿದೆ. ಆದರೆ, ಮನುಷ್ಯರು ಯಾಕೆ ಹೀಗಿದ್ದಾರೆ ಎನ್ನುವ ಪ್ರಶ್ನೆಗಳಿಗೆ ಇನ್ನೂ ಉತ್ತರಗಳು ದೊರೆತಿಲ್ಲ.