ಸೆರೆಯಲ್ಲಿರುವ ಜಗತ್ತಿನ ಅತ್ಯಂತ ಹಿರಿಯ ಮೊಸಳೆ | ಇದರ ವಯಸ್ಸೆಷ್ಟು ಗೊತ್ತಾ?
23/06/2021
ಜಗತ್ತಿನಲ್ಲಿಯೇ ಅತೀ ಹಿರಿಯ ಮುಜಾ ಎಂಬ ಮೊಸಳೆಗೆ ಇದೀಗ 85 ವರ್ಷ ವಯಸ್ಸಾಗಿದ್ದು, ಈ ಮೂಲಕ ಮುಜಾ ಇದೀಗ ತನ್ನ ದೀರ್ಘ ಜೀವಿತದಿಂದಾಗಿ ತನ್ನ ಹಿರಿಯಜ್ಜ, ಮುತ್ತಜ್ಜರನ್ನೂ ಮೀರಿಸಿದೆ.
1937ರ ಆಗಸ್ಟ್ ನಲ್ಲಿ ಜರ್ಮನಿಯಿಂದ ಯುಗೋಸ್ಲಾಮಿಯಾದ ಹಿಂದಿನ ರಾಜಧಾನಿ ಬೆಲ್ಗೇಡ್ ಗೆ ಬಂದಿದ್ದ ಈ ಮುಜಾ ಹೆಸರಿನಿಂದ ಗುರುತಿಸಲ್ಪಡುವ ಮೊಸಳೆ ಬಂದಿದೆ. ಇದು ಹುಟ್ಟಿದ ದಿನ ಯಾವುದು ಎನ್ನುವುದು ಸ್ಪಷ್ಟವಾಗಿ ತಿಳಿಯದೇ ಇದ್ದರೂ, ಈತ ಮೃಗಾಲಯಕ್ಕೆ ಬಂದಾಗ ಎರಡು ವರ್ಷ ವಯಸ್ಸಾಗಿತ್ತು ಎಂದು ಹೇಳಲಾಗಿದೆ.
ಸರ್ಬಿಯಾದಲ್ಲಿ ಸರಣಿ ಬಾಂಬಿಂಗ್ ನ್ನು ಕೂಡ ಎದುರಿಸಿ ಬದುಕಿದ್ದ ಮುಜಾ, ಇದೀಗ ಮಾಸ್ಕೋ ಮೃಗಾಲಯದ ಕಳೆದ ಮೇ ವರೆಗೂ ಸೆರೆಯಲ್ಲಿರುವ ಮೊಸಳೆಗಳ ಪೈಕಿ ಜಗತ್ತಿನ ಅತ್ಯಂತ ಹಿರಿಯ ಮೊಸಳೆಯಾಗಿತ್ತು. ಮೇ ತಿಂಗಳಲ್ಲಿ ಅತೀ ಹಿರಿಯ ಮೊಸಳೆ ಸ್ಯಾಟರ್ನ್ ಆಗಿತ್ತು. ಆದರೆ, ಮೇಯಲ್ಲಿ ಸ್ಯಾಟರ್ನ್ ಸಾವನ್ನಪ್ಪಿತ್ತು. ಹೀಗಾಗಿ ಇದೀಗ ಸ್ಯಾಟರ್ನ್ ಜಾಗವನ್ನು ಮುಜಾ ತುಂಬಿದ್ದಾನೆ.