ಆಂಧ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲಿರುವ ಪ್ರಕಾಶ್ ರೈ | ಮೆಗಾ ಸ್ಟಾರ್ ಚಿರಂಜೀವಿ ಬೆಂಬಲ
ಸಿನಿಡೆಸ್ಕ್: ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟ, ಸೂಪರ್ ಸ್ಟಾರ್ ಪ್ರಕಾಶ್ ರೈ, ಆಂಧ್ರಪ್ರದೇಶದಲ್ಲಿ ಇದೀಗ ಸುದ್ದಿಯಲ್ಲಿದ್ದಾರೆ. ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಸೋಲನುಭವಿಸಿದ್ದ ಪ್ರಕಾಶ್ ರೈ ಇದೀಗ ಇನ್ನೊಂದು ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ.
ಅಂದ ಹಾಗೆ, ಪ್ರಕಾಶ್ ರೈ ಅವರು ಈ ಬಾರಿ ಸ್ಪರ್ಧಿಸಲಿರುವುದು ಯಾವುದೋ ರಾಜಕೀಯ ಚುನಾವಣೆಯಲ್ಲಿ ಅಲ್ಲ. ಬದಲಾಗಿ ಆಂಧ್ರದ ಮೂವಿ ಆರ್ಟಿಸ್ಟ್ ಅಸೋಸಿಯೇಷನ್ ‘ಮಾ’ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಪ್ರಕಾಶ್ ರೈ ಸ್ಪರ್ಧಿಸಿದ್ದಾರೆ.
ಆಂಧ್ರದ ಮೋಹನ್ ಬಾಬು ಪುತ್ರ ಮಂಚು ವಿಷ್ಣು ವಿರುದ್ಧ ಪ್ರಕಾಶ್ ರೈ ಸ್ಪರ್ಧಿಸಿದ್ದು, ಪ್ರಕಾಶ್ ರೈಗೆ ಮೆಗಾ ಸ್ಟಾರ್ ಚಿರಂಜೀವಿ ಅವರು ಬೆಂಬಲ ನೀಡಿದ್ದಾರೆ. ಹೀಗಾಗಿ ರಾಜಕೀಯ ಚುನಾವಣೆಗಿಂತಲೂ ಈ ಚುನಾವಣೆ ರಂಗೇರಲಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ದೇಶದ ಚಿತ್ರರಂಗಕ್ಕೆ ಪ್ರಕಾಶ್ ರೈ ಕೊಡುಗೆ ಬಹಳ ಇದೆ. ಪ್ರಕಾಶ್ ರೈಯಂತಹ ನಟ ಭಾರತೀಯ ಚಿತ್ರಂಗದಲ್ಲಿ ಹೀರೋಗಳೇ ಇಲ್ಲ. ಪ್ರಕಾಶ್ ರೈ ವಿಲನ್ ಆಗಿ ಅಭಿನಯಿಸಿದ ಪ್ರತಿ ಚಿತ್ರಗಳು ಕೂಡ ಯಶಸ್ವಿಯಾಗಿದೆ. ಒಬ್ಬ ಭಯಂಕರ ವಿಲನ್ ಆಗಿಯೂ, ಒಬ್ಬ ಕಾಮಿಡಿ ವಿಲನ್ ಆಗಿಯೂ, ಒಬ್ಬ ಪೋಷಕ ನಟನಾಗಿಯೂ, ಒಬ್ಬ ಹೀರೋವಾಗಿಯೂ ಪ್ರಕಾಶ್ ಮಾಡದ ಪಾತ್ರಗಳೇ ಇಲ್ಲ. ಹಾಗೆಯೇ ಅವರು ನಟಿಸಿದ ಎಲ್ಲ ಚಿತ್ರಗಳು ಕೂಡ ಹಿಟ್ ಆಗಿವೆ. ಕೆಜಿಎಫ್ 2 ಚಿತ್ರದಲ್ಲಿ ಕೂಡ ಪ್ರಕಾಶ್ ರೈ ನಟಿಸಲಿದ್ದಾರೆ. ಆದರೆ, ಕನ್ನಡ ಚಿತ್ರರಂಗದಲ್ಲಿ ಪ್ರತಿಭಾವಂತರನ್ನು ಹಿಂದಕ್ಕೆ ತಳ್ಳುವವರೇ ಹೆಚ್ಚು. ಹಾಗಾಗಿ ಬೇರೆ ಕನ್ನಡಿಗರನ್ನು ಬೇರೆ ಚಿತ್ರರಂಗದವರು ಸೆಳೆದುಕೊಂಡು ತಮ್ಮ ಚಿತ್ರರಂಗವನ್ನು ಬೆಳೆಸುತ್ತಿದ್ದಾರೆ.