ನನ್ನ ಅಮ್ಮನನ್ನು ಗೊತ್ತಿರುವವರೇ ಹತ್ಯೆ ಮಾಡಿದ್ದಾರೆ | ರೇಖಾ ಕದಿರೇಶ್ ಪುತ್ರ ರಾಹುಲ್
24/06/2021
ಬೆಂಗಳೂರು: ನನ್ನ ಅಮ್ಮನನ್ನು ನಮಗೆ ಗೊತ್ತಿರುವವರೇ ಹತ್ಯೆ ಮಾಡಿದ್ದಾರೆ. ಪೀಟರ್ ನನ್ನ ಅಮ್ಮನ ಕತ್ತಿನ ಭಾಗಕ್ಕೆ ಹೊಡೆದಿದ್ದಾರೆ. ಪೀಟರ್ ನಮ್ಮ ಹತ್ತಿರದ ಸಂಬಂಧಿ ಎಂದು ಮೃತ ರೇಖಾ ಕದಿರೇಶ್ ಅವರು ಪುತ್ರ ರಾಹುಲ್ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.
ನನ್ನ ತಾಯಿಯ ಸುದ್ದಿ ಕೇಳಿ ನನಗೆ ಭಯವಾಗಿದೆ. ಇಂದು ನಮ್ಮ ಸಂಬಂಧಿ ಕರೆ ಮಾಡಿ ಈ ವಿಚಾರ ತಿಳಿಸಿದ್ದು, ಈ ಪೀಟರ್ ನಮ್ಮ ತಂದೆಯ ಜೊತೆಗೆ ಕೂಡ ಒಡನಾಟ ಹೊಂದಿದ್ದ. ನಮಗೆ ಗೊತ್ತಿರುವವರೇ ಈ ಕೆಲಸ ಮಾಡಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ ಎನ್ನಲಾಗಿದೆ.
ಇನ್ನೂ ನನ್ನ ತಂದೆ ಕದಿರೇಶ್ ಅವರ ಹತ್ಯೆಯ ಬಳಿಕ ತಾಯಿ ಈ ಏರಿಯಾದಿಂದ ನನ್ನನ್ನು ದೂರ ಇಟ್ಟಿದ್ದರು. ಅವರು ವಾರ್ಡ್ ನ ಜನರೊಂದಿಗೆ ಉಳಿದಿದ್ದರು ಎಂದು ರೇಖಾ ಕದಿರೇಶ್ ಅವರ ಮಗ ರಾಹುಲ್ ಪ್ರತಿಕ್ರಿಯೆ ನೀಡಿದ್ದಾರೆ.
ಫೋಟೋ: ರೇಖಾ ಹಾಗೂ ಅವರ ಪತಿ ಕದಿರೇಶ್