ಕೊರೊನಾ ಕಾಲದಲ್ಲಿ ಹುಚ್ಚಳಾದ ಮಹಿಳೆ ತನ್ನ ಮಗಳನ್ನೇ 15 ಬಾರಿ ಇರಿದುಕೊಂದಳು
ಲಂಡನ್: ಪ್ರಪಂಚದಾದ್ಯಂತ ಕೊರೊನಾ ವೈರಸ್ ಮನುಷ್ಯನ ದೇಹವನ್ನು ಮಾತ್ರವೇ ಕಾಡುತ್ತಿಲ್ಲ. ಮನುಷ್ಯನ ಮಾನಸಿಕ ಆರೋಗ್ಯವನ್ನೂ ಕೊರೊನಾ ಕಾಡುತ್ತಿದೆ. ಕೊರೊನಾ ಸೋಂಕಿಗೊಳಗಾಗಿರುವ 100 ವರ್ಷಕ್ಕೂ ಹಿರಿಯ ವ್ಯಕ್ತಿಗಳು ಕೊರೊನಾವನ್ನು ಜಯಿಸಿದ್ದಾರೆ. ಆದರೂ ಕೊರೊನಾಕ್ಕೆ ಭಯಪಡುವವರಿಗೇನೂ ಕಡಿಮೆ ಇಲ್ಲ.
ಕೊರೊನಾ, ಲಾಕ್ ಡೌನ್ ಮನುಷ್ಯರ ಮನಸ್ಸಿಗೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ. ಲಂಡನ್ ನಲ್ಲಿ ತಾಯಿಯೊಬ್ಬರು ತನ್ನ ಐದು ವರ್ಷದ ಮಗುವನ್ನು 15 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾಳೆ.
ಸುತಾ ಶಿವನಂಥಮ್ ಹೆಸರಿನ ಮಹಿಳೆ ತನ್ನ ಐದು ವರ್ಷದ ಮಗಳನ್ನು ಹತ್ಯೆ ಮಾಡಿದವಳಾಗಿದ್ದಾಳೆ. ತಾನು ಕೊರೊನಾದಿಂದ ಸತ್ತು ಹೋದರೆ, ತನ್ನ ಮಗಳು ಅನಾಥಳಾಗುತ್ತಾಳೆ ಎಂದು ಯೋಚಿಸಿ ಮಹಿಳೆ ಈ ರೀತಿಯ ಕೃತ್ಯ ಮಾಡಿದ್ದಾಳೆ ಎಂದು ಆಕೆ ತಿಳಿಸಿದ್ದಾಳೆ.
ಇನ್ನೂ ಕೋರ್ಟ್ ನಲ್ಲಿ ಕಣ್ಣೀರಿಟ್ಟ ಪತಿ, ಕೊರೊನಾದಿಂದಾಗಿ ನನ್ನ ಪತ್ನಿಯ ಮಾನಸಿಕ ಸ್ಥಿತಿ ಸರಿ ಇರಲಿಲ್ಲ. ಆಕೆ ಮಗುವನ್ನು ಹತ್ಯೆ ಮಾಡಿದ ಬಳಿಕ ನಾನು ಆಕೆಯ ಜೊತೆಗೆ ಮಾತನಾಡಿಲ್ಲ ಎಂದು ಹೇಳಿಕೆ ನೀಡಿದ್ದಾನೆ. ಇನ್ನೂ ಕೋರ್ಟ್ ಗೆ ಈ ಬಗ್ಗೆ ವರದಿ ನೀಡಿರುವ ವೈದ್ಯರು ಕೂಡ ಮಹಿಳೆ ಮಾನಸಿಕ ಸಮಸ್ಯೆ ಎದುರಿಸುತ್ತಿರುವುದು ಸತ್ಯ ಎಂದು ವರದಿ ನೀಡಿದ್ದಾರೆ.