ಕನಸಿನಲ್ಲಿ ‘ಮಂತ್ರವಾದಿ’ ನನ್ನನ್ನು ಅತ್ಯಾಚಾರ ಮಾಡುತ್ತಿದ್ದಾನೆಂದು ದೂರು ದಾಖಲಿಸಿದ ಮಹಿಳೆ - Mahanayaka
11:00 PM Wednesday 11 - December 2024

ಕನಸಿನಲ್ಲಿ ‘ಮಂತ್ರವಾದಿ’ ನನ್ನನ್ನು ಅತ್ಯಾಚಾರ ಮಾಡುತ್ತಿದ್ದಾನೆಂದು ದೂರು ದಾಖಲಿಸಿದ ಮಹಿಳೆ

patna
25/06/2021

ಪಾಟ್ನಾ: ಮಹಿಳೆಯೊಬ್ಬರು ನೀಡಿರುವ ದೂರನ್ನು ನೋಡಿ ಪೊಲೀಸರು ದಂಗಾಗಿದ್ದು, ಮಂತ್ರವಾದಿಯೊಬ್ಬ ತನ್ನ ಕನಸಿನಲ್ಲಿ ಬಂದು ನನ್ನನ್ನು ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದಾನೆ ಎಂದು ಬಿಹಾರದ ಔರಂಗಬಾದ್ ಜಿಲ್ಲೆಯ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ನನ್ನ ಮಗನನ್ನು ಮಂತ್ರವಾದಿಯ ಬಳಿಗೆ ಕರೆದೊಯ್ದಿದ್ದೆ. ಇದೇ ವರ್ಷದ ಜನವರಿಯಲ್ಲಿ ನಾನು ಮಂತ್ರವಾದಿಯನ್ನು ಭೇಟಿ ಮಾಡಿದ್ದೆ. ಅವರ ಭೇಟಿಯ ಸಂದರ್ಭದಲ್ಲಿ ಕೆಲವೊಂದು ಮಂತ್ರವನ್ನು ಪಠಿಸಲು ಅವರು ಹೇಳಿದರು. ಕೆಲವು ಧಾರ್ಮಿಕ ಆಚರಣೆಗಳನ್ನು ಆಚರಿಸಲೂ ಹೇಳಿದರು. ಇದಾದ 15 ದಿನಗಳ ಬಳಿಕ ನನ್ನ ಮಗ ವಿವರಿಸಲು ಸಾಧ್ಯವಾಗದ ಕಾಯಿಲೆಯಿಂದ ಸಾವನ್ನಪ್ಪಿದ್ದಾನೆ. ಅವನು ಸಾವನ್ನಪ್ಪಿದ ಬಳಿಕ ಮಂತ್ರವಾದಿ ನನ್ನ  ಕನಸಿನಲ್ಲಿ ಬಂದು ಅತ್ಯಾಚಾರ ನಡೆಸುತ್ತಿದ್ದಾನೆ. ಸತ್ತು ಹೋಗಿರುವ ನನ್ನ ಮಗ ಮಂತ್ರವಾದಿಯ ಅತ್ಯಾಚಾರದಿಂದ ನನ್ನನ್ನು ರಕ್ಷಿಸುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇನ್ನೂ ಮಹಿಳೆಯ ದೂರಿನನ್ವಯ ಮಂತ್ರವಾದಿಯನ್ನು ಠಾಣೆಗೆ ಕರೆಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ, ಈ ಪ್ರಕರಣ ಬಹಳ ವಿಚಿತ್ರವಾಗಿದೆ. ಅತ್ಯಾಚಾರದ ಕನಸು ಬಿದ್ದರೆ, ಆರೋಪಿಯನ್ನು ಶಿಕ್ಷಿಸುವುದು ಹೇಗೆ ಎನ್ನುವ ಸಂಕಟ ಪೊಲೀಸರದ್ದಾಗಿದೆ.

ಇನ್ನೂ ಮಹಿಳೆ ಮಾನಸಿಕ ಅಸ್ವಸ್ಥತೆಯಿಂದ ಕೂಡಿರಬಹುದು ಎಂದು ಪೊಲೀಸರು ಕೂಡ ಹೇಳಿದ್ದಾರೆ. ಹೀಗಾಗಿ ಅವರನ್ನು ಮನೋವೈದ್ಯರ ಬಳಿಗೆ ಚಿಕಿತ್ಸೆಗಾಗಿ ಕಳುಹಿಸುವಂತೆ ಅವರ ಸಂಬಂಧಿಕರನ್ನು ಸಂಪರ್ಕಿಸಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಲಲಿತ್ ನಾರಾಯಣ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ