ಅಮೆರಿಕ ಆಸ್ಪತ್ರೆಯಿಂದ ಹೊರ ಬಂದ ಸೂಪರ್ ಸ್ಟಾರ್ ರಜನಿಕಾಂತ್
ಸಿನಿಡೆಸ್ಕ್: ಆರೋಗ್ಯ ತಪಾಸಣೆಗೆ ಅಮೆರಿಕದ ಮಯೋ ಕ್ಲಿನಿಕ್ ಗೆ ತೆರಳಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. ರಜನಿಕಾಂತ್ ಜೊತೆಗೆಯಲ್ಲಿ ಪುತ್ರಿ ಐಶ್ವರ್ಯ ಹಾಗೂ ಅಳಿಯ ಧನುಷ್ ಕೂಡ ಇದ್ದಾರೆ.
2016ರಲ್ಲಿ ರಜನಿಕಾಂತ್ ಮೂತ್ರಪಿಂಡದ ಕಸಿ ಚಿಕಿತ್ಸೆಗೊಳಗಾಗಿದ್ದರು. ಇದೀಗ ನಿಯಮಿತ ತಪಾಸಣೆಗಾಗಿ ಅವರು ಮಯೋ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಜೂನ್ 19ರಂದು ರಜನಿಕಾಂತ್ ದಂಪತಿ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಅಮೆರಿಕಕ್ಕೆ ವೈದ್ಯಕೀಯ ಕಾರಣಕ್ಕಾಗಿ ತೆರಳಲು ವಿಶೇಷ ಅನುಮತಿಯನ್ನು ಕೂಡ ಪಡೆದುಕೊಂಡಿದ್ದರು.
ಸದ್ಯ ಧನುಷ್ ಹಾಗೂ ಅವರ ಪತ್ನಿ ಶೂಟಿಂಗ್ ಕಾರಣಕ್ಕಾಗಿ ಅಮೆರಿಕದಲ್ಲಿದ್ದಾರೆ. ಇತ್ತೀಚೆಗೆ ರಜನಿಕಾಂತ್ ಹಾಗೂ ಅವರ ಪುತ್ರಿ ಐಶ್ವರ್ಯಾ ಅಮೆರಿಕದ ಮಯೋ ಕ್ಲಿನಿಕ್ನಿಂದ ಹೊರಬರುತ್ತಿದ್ದ ವೇಳೆ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ಹರಿದಾಡುತ್ತಿದ್ದಂತೆಯೇ ಅಭಿಮಾನಿಗಳು ರಜನಿಕಾಂತ್ರ ಆರೋಗ್ಯ ಕ್ಷೇಮವಾಗಿರಲಿ ಎಂದು ಹಾರೈಸಿದ್ದಾರೆ.
ಇನ್ನೂ ರಜನಿಕಾಂತ್ ಅವರು ರಾಜಕೀಯಕ್ಕೆ ಎಂಟ್ರಿ ಪಡೆಯಲು ಮುಂದಾಗಿದ್ದರು. ಆದರೆ, ಈ ನಡುವೆ ಅವರಿಗೆ ಅನಾರೋಗ್ಯ ತೀವ್ರವಾಗಿ ಕಾಡಿತ್ತು. ಈ ಹಿನ್ನೆಲೆಯಲ್ಲಿ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು.