ಮಾದಕ ದ್ರವ್ಯ ವಿರುದ್ಧ ಎಸ್ಸೆಸ್ಸೆಫ್ ನಿಂದ ಪೋಸ್ಟರ್ ಪ್ರದರ್ಶನ
![ssf](https://www.mahanayaka.in/wp-content/uploads/2021/06/ssf-2.jpg)
27/06/2021
ಪುತ್ತೂರು: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯು ಆಯೋಜಿಸಿದ ಮಾದಕ ವಸ್ತುಗಳ ಸೇವನೆ ವಿರೋಧಿ ಅಭಿಯಾನವು, ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ಎಸ್ಸೆಸ್ಸೆಫ್ ಕೆಮ್ಮಾಯಿ ಶಾಖೆಯ ವತಿಯಿಂದ ಪೋಸ್ಟರ್ ಪ್ರದರ್ಶನ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ SSF ಬಳ್ಳಾರಿ ಜೆಲ್ಲೆ ಕ್ಯಾಂಪಸ್ ಕಾರ್ಯದರ್ಶಿ ಅಬೂಬಕ್ಕರ್ ಮರ್ಝುಖಿ ಸಖಾಫಿ ಮಾತನಾಡಿ, ಯುವ ಸಮೂಹಕ್ಕೆ ಮಾದಕ ವಸ್ತುಗಳಿಂದಾಗುವ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಎಸ್.ವೈ.ಎಸ್ ಕೆಮ್ಮಾಯಿ ಬ್ರಾಂಚ್ ನಾಯಕರಾದ ಬಳ್ಳಾರಿ ರಫೀಕ್ ಸಖಾಫಿ, ಅಝೀಝ್ ಕೆಮ್ಮಾಯಿ ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಕೆಮ್ಮಾಯಿ ಶಾಖಾ ಅಧ್ಯಕ್ಷ ರಫೀಕ್ ಕೆಮ್ಮಾಯಿ ಸ್ವಾಗತಿಸಿ, ಕಾರ್ಯದರ್ಶಿ ಅಫ್ರೀದ್ ಕೆಮ್ಮಾಯಿ ವಂದಿಸಿದರು.