“ಹೆಣ್ಣು ಮಗಳನ್ನು ಮಲಗು ಬಾ ಎಂದೆಲ್ಲ ನೀನು ಕರೆಯುತ್ತಿ” | ಬಿಗ್ ಬಾಸ್ ಮನೆಯಲ್ಲಿ ಮಂಜು ವಿರುದ್ಧ ಅಬ್ಬರಿಸಿದ ಚಂದ್ರಚೂಡ್

ಕೊರೊನಾದಿಂದಾಗಿ ಬಿಗ್ ಬಾಸ್ ಸ್ಥಗಿತಗೊಂಡ ಸಂದರ್ಭದಲ್ಲಿ 43 ದಿನಗಳ ಕಾಲ ಮನೆಯಲ್ಲಿದ್ದ ಸದಸ್ಯರಿಗೆ ಅವರ ಮನೆಯಲ್ಲಿ ಆದ ಅನುಭವಗಳ ಬಗ್ಗೆ ಅಭಿಪ್ರಾಯ ತಿಳಿಸಲು ಕಿಚ್ಚ ಸುದೀಪ್ ಬಿಗ್ ಬಾಸ್ ಸೆಕೆಂಡ್ ಇನಿಂಗ್ಸ್ ನ ಮೊದಲ ವಾರದ ಕಥೆಯಲ್ಲಿ ಹೇಳಿದ್ದು, ಆದರೆ, ಇದು ವೈಯಕ್ತಿಕ ಟೀಕೆಗಳಿಗೆ ಕಾರಣವಾಗಿ ಮಂಜು ಹಾಗೂ ಚಕ್ರವರ್ತಿ ಚಂದ್ರಚೂಡ್ ನಡುವೆ ತಿಕ್ಕಾಟಕ್ಕೆ ಕಾರಣವಾಯಿತು.
ಸುದೀಪ್ ಅವರು ವಿಷಯ ಪ್ರಸ್ತಾಪಿಸಿದ ಸಂದರ್ಭದಲ್ಲಿ ಮಂಜು ಮಾತನಾಡಿ, ಚಕ್ರವರ್ತಿ ಚಂದ್ರಚೂಡ್ ಹಾಗೂ ಪ್ರಶಾಂತ್ ಜೊತೆಗೆ ಸೇರಬೇಡ ಮನೆಯಲ್ಲಿ ಹೇಳಿದರು ಎಂದು ಹೇಳಿದರು. ಈ ಹೇಳಿಕೆಯಿಂದ ಚಂದ್ರಚೂಡ್ ಅವರು ಕೋಪಿಸಿಕೊಂಡರು.
ಈ ವೇಳೆ ಮಾತನಾಡುವುದಿದ್ದರೆ ಮಾತನಾಡಬಹುದು ಎಂದು ಸುದೀಪ್ ಸೂಚಿಸಿದರು. ಈ ವೇಳೆ ಮಾತನಾಡಿದ ಚಂದ್ರಚೂಡ್, ಮಂಜು ಒಬ್ಬ ಹೆಣ್ಣು ಮಗಳನ್ನು ಮಲಗು ಬಾ, ನುಗ್ಗೆಕಾಯಿ, ಮಾವಿನಕಾಯಿ ಎಂದೆಲ್ಲ ಮಾತನಾಡುತ್ತಾನೆ. ಪ್ರವಳ್ಳಿ ಎಂಬ ಪದ ಪ್ರಯೋಗಿಸುತ್ತಾನೆ. ಹಾಗೆಂದ್ರೆ ಅರ್ಥವೇನು? ಎಂದು ಅಬ್ಬರಿಸಿದರು. ತಮ್ಮ ಜೊತೆಗೆ ಸೇರಬಾರದು ಅಂದ್ರೆ, ಮಂಜು ಎಂತಹವನು ಎನ್ನುವುದನ್ನು ಅವರು ತಮ್ಮ ಪ್ರಶ್ನೆಗಳಲ್ಲಿಯೇ ಮರು ಪ್ರಶ್ನೆ ಹಾಕಿದರು. ಈವರೆಗೆ ಚಂದ್ರಚೂಡ್ ಅಬ್ಬರವನ್ನು ಕಂಡರಿಯದ ಕಿಚ್ಚ ಸುದೀಪ್ ಸೇರಿದಂತೆ ಇತರ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಾರೆ.
ಈ ವೇಳೆ ಚಂದ್ರಚೂಡ್ ಆರೋಪಕ್ಕೆ ಪ್ರತ್ಯುತ್ತರ ನೀಡಿದ ಮಂಜು, ಹೆಣ್ಣು ಮಕ್ಕಳು ಎಂದು ಹೇಳ್ತಿಯಲ್ಲ, ನೀನು ಹೇಗೆ ಬಂದಿದ್ದಿ ಇಲ್ಲಿಗೆ ಎನ್ನುವುದು ನನಗೆ ಗೊತ್ತಿದೆ ಎಂದು ಮತ್ತೆ ಚಂದ್ರಚೂಡ್ ಅವರನ್ನು ಕೆಣಕಿದರು. ಈ ವೇಳೆ ಚಂದ್ರಚೂಡ್, ಹೇಗೆ ಬಂದಿದ್ದೇನೆ ಹೇಳು ಎಂದು ಪ್ರತಿ ಪ್ರಶ್ನೆ ಹಾಕಿದರು. ಈ ವೇಳೆ ಉತ್ತರಿಸಲು ಮಂಜು ವಿಫಲರಾದರು. ಈ ವೇಳೆ ಸುದೀಪ್ ಮಾತನಾಡಿ, ನೀವು ಏನಾದರೂ ಹೇಳಿದರೆ ಅದಕ್ಕೆ ಉತ್ತರ ಕೊಡಬೇಕಾಗುತ್ತದೆ ಎಂದರು.
ಈ ವೇಳೆ ಮತ್ತೆ ಆಕ್ರೋಶ ವ್ಯಕ್ತಪಡಿಸಿದ ಚಂದ್ರಚೂಡ್, ನನಗೆ ಎರಡು ವಿಚ್ಛೇದನ ಆಗಿದೆ. ಭಾರತೀಯ ಸಂವಿಧಾನದ ಮೂಲಕ ವಿಚ್ಛೇದನ ಪಡೆದಿದ್ದೇನೆ. ಮಂಜು ಸಂವಿಧಾನಕ್ಕಿಂತ ದೊಡ್ಡವನಲ್ಲ. ನನ್ನ ವೈಯಕ್ತಿಕ ಜೀವನದ ಬಗ್ಗೆ ನಾನು ಮಾತನಾಡುತ್ತೇನೆ ಎಂದು ಮಂಜು ವಿರುದ್ಧ ಅಬ್ಬರಿಸಿದರು.