“ದಲಿತ ಸಿಎಂ” ಕೂಗನ್ನು ಡೈವರ್ಟ್ ಮಾಡಿದ್ರಾ ಸಿ.ಟಿ.ರವಿ? | ಈಗೇನು ಅಲ್ಪಸಂಖ್ಯಾತರ ಮೇಲೆ ವಿಶೇಷ ಲವ್ವು? - Mahanayaka
9:24 AM Thursday 12 - December 2024

“ದಲಿತ ಸಿಎಂ” ಕೂಗನ್ನು ಡೈವರ್ಟ್ ಮಾಡಿದ್ರಾ ಸಿ.ಟಿ.ರವಿ? | ಈಗೇನು ಅಲ್ಪಸಂಖ್ಯಾತರ ಮೇಲೆ ವಿಶೇಷ ಲವ್ವು?

c t ravi
28/06/2021

ಬೆಂಗಳೂರು: ಮಾಜಿ ಸಚಿವ, ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರು ಪ್ರಸ್ತಾಪಿಸಿದ ದಲಿತ ಸಿಎಂ ವಿಚಾರ ಇದೀಗ ರಾಜ್ಯಾದ್ಯಂತ ಪ್ರಮುಖ ಚರ್ಚಾ ವಿಚಾರವಾಗಿದೆ. ಮುಂದಿನ ಸಿಎಂ ಎಂಬ ಚರ್ಚೆಯೊಳಗೆ ಇದೀಗ ದಲಿತ ಸಿಎಂ ಎನ್ನುವ ವಿಚಾರ ತೀವ್ರ ಚರ್ಚೆಯಾಗುತ್ತಿದೆ. ಈ ಎಲ್ಲ ರಾಜಕೀಯ ಬೆಳವಣಿಗೆಯ ನಡುವೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಅಲ್ಪಸಂಖ್ಯಾತರ ಮುಖ್ಯಮಂತ್ರಿ ಎಂಬ ಹೇಳಿಕೆಯನ್ನು ನೀಡಿದ್ದಾರೆ.

ಮುಂದಿನ ಸಿಎಂ ವಿಚಾರವಾಗಿ ಹೇಳಿಕೆ ನೀಡಿರುವ ಸಿ.ಟಿ.ರವಿ,  ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿಯಾಗುವ ಅರ್ಹತೆ ಇರುವುದು  ಅಲ್ಪಸಂಖ್ಯಾತ ಸಮುದಾಯದವರಿಗೆ.  ಇಷ್ಟು ದಿನ ಓಟು ಗಿಟ್ಟಿಸಿಕೊಳ್ಳುತ್ತಿದ್ದ ಕಾಂಗ್ರೆಸ್ ನವರು ಈಗಲಾದರೂ ಸಮುದಾಯದವರನ್ನು ಸಿಎಂ ಮಾಡಲಿ ಎಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ಸಿನಿಂದ ಸಿ.ಎಂ.ಇಬ್ರಾಹಿಂ ಅವರು ಮುಂದಿನ ಮುಖ್ಯಮಂತ್ರಿಯಾದರೆ, ನನ್ನ ಬೆಂಬಲ ಅವರಿಗಿರಲಿದೆ. ಬಿಜೆಪಿಯಲ್ಲಿ ಈಗ ಸಿಎಂ ಸ್ಥಾನ ಖಾಲಿಯಿಲ್ಲ ಎಂದು ಅವರು ಹೇಳಿದ್ದಾರೆ.

ಸದ್ಯ ರಾಜ್ಯದಲ್ಲಿ ದಲಿತ ಸಿಎಂ ಎನ್ನುವ ಚರ್ಚೆ ತೀವ್ರವಾಗಿ ನಡೆಯುತ್ತಿರುವಾಗಲೇ, ಅಲ್ಪಸಂಖ್ಯಾತ ಸಮುದಾಯಕ್ಕೆ ಸಿಎಂ ಸ್ಥಾನ ನೀಡಬೇಕು ಎನ್ನುವ ಒತ್ತಾಯವನ್ನು ಸಿ.ಟಿ.ರವಿ ಮಾಡಿದ್ದಾರೆ. ಇದರಿಂದಾಗಿ ದಲಿತ-ಮುಸ್ಲಿಮ್ ನಡುವೆ ಸ್ಪರ್ಧೆ ಉಂಟಾಗುವಂತಹ ಸ್ಥಿತಿ ನಿರ್ಮಾಣವಾಗಬಹುದು  ಎನ್ನುವ ನಿರೀಕ್ಷೆ ಅವರಿಗಿದ್ದಿರಬಹುದು ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.

ರಾಜ್ಯದಲ್ಲಿ ನಂ 1 ಜನ ಸಂಖ್ಯೆ ಇರುವ ದಲಿತ ಸಮುದಾಯ ಅಧಿಕಾರದಿಂದ ವಂಚಿತವಾಗಿದೆ. ಕಾಂಗ್ರೆಸ್ ಎಷ್ಟೋ ವರ್ಷಗಳಿಂದ ದಲಿತರ ಮತಗಳಿಂದಲೇ ಗೆಲ್ಲುತ್ತಾ ಬಂದಿದೆ. ಈ ಬಾರಿ ಕಾಂಗ್ರೆಸ್ ನಿಂದ ದಲಿತ ಸಿಎಂ ಮಾಡಬೇಕು. ಈ ಮೂಲಕ ಕಾಂಗ್ರೆಸ್ ತನ್ನ ಜಾತ್ಯಾತೀತೆಯನ್ನು ಸಾಬೀತುಪಡಿಸಲಿ ಎನ್ನುವ ಕೂಗು ಇನ್ನಷ್ಟು ಗಟ್ಟಿಯಾಗುತ್ತಲೇ ಇದೆ. ಈ ನಡುವೆ ಸಿ.ಟಿ.ರವಿ ಅವರು ಈ ಹೋರಾಟದ ದಿಕ್ಕು ತಪ್ಪಿಸಲು ಸಿಎಂ ಇಬ್ರಾಹಿಂ ಮೇಲೆ ಮತ್ತು ಅಲ್ಪಸಂಖ್ಯಾತರ ಮೇಲೆ ಅತೀವ ಪ್ರೀತಿ ತೋರಿಸುತ್ತಿದ್ದಾರೆ ಎನ್ನುವ ಮಾತುಗಳು ಇದೀಗ ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ