ಸೋಶಿಯಲ್ ಮೀಡಿಯಾ ಸ್ಟಾರ್ ಹಿಮಾಂಶಿ ನದಿಗೆ ಹಾರಿ ಆತ್ಮಹತ್ಯೆ | ಕಾರಣ ಏನು ಗೊತ್ತಾ?
ನವದೆಹಲಿ: ಸೋಶಿಯಲ್ ಮೀಡಿಯ ಸ್ಟಾರ್ ಹಿಮಾಂಶಿ ಗಾಂಧಿ, ಸಿಗ್ನೇಚರ್ ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜೂನ್ 24ರಂದು ನಡೆದಿದ್ದು, ಆತ್ಮಹತ್ಯೆ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ಜೂನ್ 24ರಂದು ಹಿಮಾಂಶಿ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ಬಂದಿತ್ತು. ಜೂನ್ 25ರಂದು ಮಧ್ಯಾಹ್ನ ಯಮುನಾ ನದಿಯ ಕುಡೆಶಿಯಾಘಾಟ್ ನಲ್ಲಿ ಸುಮಾರು 1 ಗಂಟೆಗೆ ಮೃತದೇಹ ಪತ್ತೆಯಾಗಿತ್ತು.
ಇನ್ನೂ ಆತ್ಮಹತ್ಯೆಗೆ ಕಾರಣವೇನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಪೊಲೀಸರು ಈ ಬಗ್ಗೆ ಇದೀಗ ತನಿಖೆ ನಡೆಸುತ್ತಿದ್ದು, ಹಿಮಾಂಶಿಯ ಸ್ನೇಹಿತರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದ ಹಿಮಾಂಶಿ ಯಾಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ. ಆದರೆ, ಈ ಬಗ್ಗೆ ಇನ್ನೂ ಕೂ ಯಾವುದೇ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ.
ಹಿಮಾಂಶಿ ಸೇತುವೆಯಿಂದ ಕೆಳಗೆ ಹಾರಿದ ವೇಳೆ ಸಾಕಷ್ಟು ಜನರು ಅಲ್ಲಿದ್ದರೂ ಯಾರಿಗೆ ಕೂಡ ಇದು ಗಮನಕ್ಕೆ ಬಂದಿರಲಿಲ್ಲ. ಹಿಮಾಂಶಿ ನದಿಗೆ ಹಾರಿದ ಸ್ಥಳದಿಂದ ಸ್ವಲ್ಪವೇ ದೂರದಲ್ಲಿ ಸಾರ್ವಜನಿಕರಿದ್ದರು.