ಶೋಷಿತರಿಗೋಸ್ಕರ ಧ್ವನಿ ಎತ್ತಿದ  ಫಾ.ಸ್ಟ್ಯಾನ್ ಸ್ವಾಮಿಗಾಗಿ -ಆದರ್ಶ್ ಜೋಸೆಫ್ - Mahanayaka
6:03 PM Friday 20 - September 2024

ಶೋಷಿತರಿಗೋಸ್ಕರ ಧ್ವನಿ ಎತ್ತಿದ  ಫಾ.ಸ್ಟ್ಯಾನ್ ಸ್ವಾಮಿಗಾಗಿ -ಆದರ್ಶ್ ಜೋಸೆಫ್

father stan swamy
05/07/2021

ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಹುಟ್ಟಿ ಬೆಳೆದು ಜೆಸ್ಯುಟ್ ಫಾದ್ರಿಯಾಗಿ ಜಾರ್ಖಂಡ್ ನಲ್ಲಿ ತನ್ನ ಸೇವೆಯನ್ನು ಮಾಡುತ್ತಿದ್ದಾರೆ. ಜಾತಿ, ಧರ್ಮ, ಪಂಗಡ ಎಂಬ ಮೇಲು ಕೀಳು ಭಾವನೆ ಇಲ್ಲದೆ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನೇ ತೊಡಗಿಸಿಕೊಂಡು ಬಂದಿದ್ದಾರೆ. ಶೋಷಿತರಿಗೋಸ್ಕರ ಧ್ವನಿ ಎತ್ತಿದ ಅವರನ್ನು ದೇಶದ್ರೋಹ ಪ್ರಕರಣ ದಾಖಲಿಸಿ NIA   ಬಂಧಿಸಿರುವುದು ಖಂಡನೀಯವಾಗಿದೆ ಹಾಗೂ ಮಾನವ ಹಕ್ಕುಗಳ ಮೇಲಿನ ದೌರ್ಜನ್ಯವಾಗಿದೆ.

ಸ್ವತಂತ್ರ ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಸರ್ಕಾರದ ವಿರುದ್ಧ ಧ್ವನಿ ಎತ್ತುವವರು… ಬಡವರಿಗೋಸ್ಕರ…. ಶೋಷಿತರಿಗೋಸ್ಕರ ಮಾತಾಡುವವರ ಮೇಲೆ ಇಲ್ಲ- ಸಲ್ಲದ ಪ್ರಕರಣಗಳನ್ನು ದಾಖಲಿಸಿ ಬಂಧಿಸುವುದು ರೂಢಿಯಾಗಿದೆ. ಸ್ವತಂತ್ರ ಭಾರತದಲ್ಲಿ ಸ್ವಾತಂತ್ರ್ಯ ಅಪಾಯದಲ್ಲಿ ಇರುವುದನ್ನು ಕಂಡರೂ ನಾವು ಮೌನವಾಗಿರುವುದು ದೇಶಕ್ಕೆ ಅಪಾಯ ಎಂದು ನಾವು ತಿಳಿಯಲೇ ಬೇಕು.  ಈ ರೀತಿ ಸರಕಾರಗಳು ಸರ್ವಾಧಿಕಾರಿ ಧೋರಣೆ ಮುಂದುವರಿಸಿದರೆ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮಾಯವಾಗಲುಬಹುದು. ಆದುದರಿಂದ ಮೌನ ಮುರಿದು ದೇಶದ ಹಿತಕೊಸ್ಕರ ಜಾತಿ, ಧರ್ಮದ  ಹಂಗಿಲ್ಲದೆ ಪ್ರಜಾಪ್ರಭುತ್ವ  ವ್ಯವಸ್ಥೆ ಯನ್ನು ಎತ್ತಿ ಹಿಡಿಯೋಣ.

ಬಂಧನದ ಹಿಂದೆ ಇರುವ ರಹಸ್ಯ


Provided by

ಫಾ.ಸ್ಟ್ಯಾನ್ ಸ್ವಾಮಿ   ತನ್ನ 84ನೇ ವಯಸ್ಸಿನಲ್ಲೂ ಆದಿವಾಸಿ.. ದಲಿತ ವಿಭಾಗದ ಧ್ವನಿಯಾಗಿ ಮತ್ತು ಸಮಾಜದಲ್ಲಿ ಶೋಷಣೆಗೆ ಅನುಭವಿಸುತಿರುವ ಪರವಾಗಿ, ಅವರ ಅವಕಾಶಕ್ಕಾಗಿ ನಡೆಯುವ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದಾರೆ  ಎಂಬುವುದು ನಾವು ನೆನಪಿಡ ಬೇಕಾಗಿದೆ. ಅದೂ ಅಲ್ಲದೆ ಆದಿವಾಸಿ ವಿಭಾಗ  ಮತ್ತು  ದಲಿತರ ಅವಕಾಶಗಳನ್ನು ಕಡೆಗಣಿಸುವ ಸರಕಾರದ ವಿರುದ್ಧ ಸಹ ಧ್ವನಿ ಎತ್ತುವಲ್ಲಿ ಮತ್ತು ಅವರ ಅವಕಾಶಕ್ಕಾಗಿ ನಡೆಸಿರುವ ಹೋರಾಟಗಳು ಯಶಸ್ಸು ಕಂಡಿದೆ. ಇದೂ ಸರಕಾರದ  ಮತ್ತು ಕಾರ್ಪೊರೇಟ್ ಸಂಸ್ಥೆಗಳ ನಿದ್ದೆಗೆಡಿಸಿದೆ.

ಫಾ. ಸ್ಟ್ಯಾನ್ ಸ್ವಾಮಿ ತನ್ನ 50 ವರ್ಷದ ಮಿಷನರಿ ಹಾಗೂ ಸಾಮಾಜಿಕ ಬದುಕಿನಲ್ಲಿ ಧರ್ಮ ಪರಿವರ್ತನೆಗಿಂತ ಮಾನವ ಪರಿವರ್ತನೆಗೆ ಹೆಚ್ಚು ಆದ್ಯತೆಯನ್ನು ನೀಡಿದರು. ಮಾನವ ಪರಿವರ್ತನೆಗೆ ಆದ್ಯತೆ ನೀಡಿ ಹೋರಾಟ ನಡೆಸಿದ್ದರಿಂದ  ಸರಕಾರದ, ಅಧಿಕಾರಿಗಳ, ಕಾರ್ಪೊರೇಟ್ ಗಳ ಕೆಂಗಣ್ಣಿಗೆ ಗುರಿಯಾದರು.

ಸ್ಟ್ಯಾನ್ ಸ್ವಾಮಿ ನೇತೃತ್ವದಲ್ಲಿ ಮಾಡಿದ ಹೋರಾಟಗಳು

(1)  ಆದಿವಾಸಿ ಜನರನ್ನು, ದಲಿತರನ್ನು ಒಟ್ಟು ಸೇರಿಸಿ ಅವರ ಅವಕಾಶಕ್ಕಾಗಿ ಹೋರಾಟ ನಡಸಿದರು.

(2) ಅವರಿಗೆ ವಿದ್ಯೆ ಯನ್ನು ನೀಡಿ ದಲಿತರ ಮತ್ತು ಆದಿವಾಸಿ ಜನರ ಹಕ್ಕುಗಳು ಮತ್ತು ಅವಕಾಶ ಗಳ ಬಗ್ಗೆ ತಿಳುವಳಿಕೆ ನೀಡಿದರು.

(3) ದಲಿತರನ್ನು ಮತ್ತು ಆದಿವಾಸಿ ಜನರನ್ನು ಶೋಷಣೆ ಮಾಡುವವರ ವಿರುದ್ದ ಧ್ವನಿ ಎತ್ತಿದರು.

(4) ನಕ್ಸಲ್ ಮತ್ತು ಮಾವೋವಾದಿ ನಂಟು ಆರೋಪಿಸಿ ಆದಿವಾಸಿ ಯುವಕರನ್ನು ಅನ್ಯಾಯವಾಗಿ ಕಾರಾಗೃಹದಲ್ಲಿ ಇರಿಸಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡಿದರು.

(5) ಆರೋಪ ಹೊರಿಸಿ  ಕಾರಾಗೃಹದಲ್ಲಿ ಇಟ್ಟಿರುವ  98% ಆದಿವಾಸಿ ಯುವಕರಿಗೆ  ನಕ್ಸಲ್ ಮತ್ತು ಮಾವೋವಾದಿ ನಂಟು ಇಲ್ಲಾ ಎಂದು ಸಾಕ್ಷಿ ಸಮೇತ ಹೇಳಿದ್ದು ಸರಕಾರಕ್ಕೆ ಹಿನ್ನಡೆಯಾಯಿತು.

(6) ನಿಯಮ ವಿರುದ್ದವಾದ ಗಣಿ ವ್ಯವಸಾಯಗಳ ವಿರುದ್ಧ ಧ್ವನಿ ಎತ್ತಿದಾಗಿನಿಂದಲೇ ಅಧಿಕಾರಿಗಳ ಮತ್ತು ಸರಕಾರದ ಕೆಂಗಣ್ಣಿಗೆ ಗುರಿಯಾದರು.

(7) 90 ರ ದಶಕಗಳಲ್ಲಿ ಆದಿವಾಸಿ ಜನರ ಭೂಮಿಯನ್ನು ಹೊಕ್ಕರಿಸಿ ಅವರನ್ನು ಹೊರಗಟ್ಟಲು ಕಾರ್ಪೊರೇಟ್ ಗಳು ಮುಂದೆ ಬಂದಾಗ ಸ್ಟ್ಯಾನ್ ಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡಸಿದರು.

(8) ದಲಿತರಿಗೆ  ಮತ್ತು ಆದಿವಾಸಿ ಜನರಿಗೆ ವಿದ್ಯೆ ಮತ್ತು ತಿಳುವಳಿಕೆ ನೀಡುವುದರ ಮೂಲಕ  ಜೀತದಾಳು ಪದ್ಧತಿಗೆ ವಿರಾಮ ಹಾಡಿದರು. ಇದು ಭೂಮಾಲಿಕರ ನಿದ್ದೆ ಗಡಿಸಿದವು.

ಸ್ಟ್ಯಾನ್ ಸ್ವಾಮಿ ಶೋಷಿತರ, ಆದಿವಾಸಿಗಳ ಧ್ವನಿಯಾಗಿ ಮುಂದೆ ನಿಂತು ಹೋರಾಟ ನಡೆಸಿದಾಗ ಅವರಿಗೂ ಮಾವೋವಾದಿ ನಂಟು ಆರೋಪಿಸಿ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಿದ್ದರೂ ಅವರನ್ನು ಬಂಧಿಸಿರುವುದು  ಮಾನವ ಹಕ್ಕುಗಳ ದೌರ್ಜನ್ಯವಾಗಿದೆ. ಜಾತಿ ಭ್ರಮೆ ಮತ್ತು ವೈಯುಕ್ತಿಕ ಭ್ರಮೆಯನ್ನು ಬಿಟ್ಟು ನ್ಯಾಯಕ್ಕಾಗಿ ಮಾನವ ಹಕ್ಕುಗಳಿಗೋಸ್ಕರ ಕೈ ಜೋಡಿಸೋಣ. ಈಗಾಗಲೇ ಇತಿಹಾಸಾಗರ ರಾಮಚಂದ್ರ ಗುಹಾ, ಪ್ರಶಾಂತ್ ಭೂಷಣ್, ಅನೇಕ ಸಾಮಾಜಿಕ ಕಾರ್ಯಕರ್ತರು ಮತ್ತು  CBCI  ಸ್ಟ್ಯಾನ್ ಸ್ವಾಮಿಯವರ ಬಂಧನವನ್ನು ಖಂಡಿಸಿದಾರೆ.

ಮಿಷನರಿಗಳು ಮತಾಂತರಿಗಳೇ?

ಮಿಷನರಿ ಅಂದರೆ ಮತಾಂತರ ಮಾಡುವವರಲ್ಲ ಬದಲಾಗಿ ಮಾನವ ಪರಿವರ್ತನೆ ಮಾಡುವವರು. ಅದು ಹೇಗೆ? ನಮ್ಮ ದೇಶದಲ್ಲಿ ಕೆಲವರು ತಿಳಿದುಕೊಂಡಿರುವುದು  ಮಿಷನರಿಗಳು ಅಂದರೆ ಮತಾಂತರ ಮಾಡುವವರು ಎಂಬ ರೀತಿಯಲ್ಲಿ ಆ ತಿಳುವಳಿಕೆ ತಪ್ಪು. ಯಾರನ್ನು ಸಹ ಬಲಾತ್ಕಾರವಾಗಿ  ಮತಾಂತರ ಮಾಡುವವರಲ್ಲ ಮಿಷನರಿಗಳು ಬದಲಾಗಿ ಅವರು  ಮಾನವ ಪರಿವರ್ತನೆ ಮಾಡುತ್ತಾರೆ. ಯಾವ ರೀತಿ ಅಂದರೆ, ಸಮಾಜದ ಶೋಷಿತ ವರ್ಗದವರಿಗೆ, ದಲಿತರಿಗೆ, ಆದಿವಾಸಿ ಬುಡಕಟ್ಟು ವಿಭಾಗಕ್ಕೆ ವಿದ್ಯೆಯನ್ನು ನೀಡುವುದರ ಮೂಲಕ ಮತ್ತು ಅವರ ಅವಕಾಶ ಹಾಗೂ ಹಕ್ಕುಗಳ ಕುರಿತು ತಿಳುವಳಿಕೆ ಕೊಡುವುದರ ಮೂಲಕ ಅವರಿಗೂ ಸಹ ಸಮಾಜದಲ್ಲಿ ಒಂದು ಪ್ರಮುಖ ಸ್ಥಾನವಿದೆ ಎಂದು ತೋರಿಸಿ ಅವರನ್ನು ಸಮಾಜದ  ಮುಖ್ಯ ವಾಹಿನಿಗೆ ಕರೆದೊಯ್ಯುವುದು ಬದುಕಲು ಕಲಿಸುವುದೇ   ಮಾನವ ಪರಿವರ್ತನೆ.

ಸಂತ ಲೂಕ ಶುಭಸಂದೇಶ ಅಧ್ಯಾಯ 4,18

**ದೇವರ ಆತ್ಮ ನನ್ನ ಮೇಲಿದೆ

ದೀನದಲಿತರಿಗೆ ಶುಭ ವಾರ್ತೆಯನ್ನು ಸಾರಲು, ಬಂಧಿತರಿಗೆ ಬಿಡುಗಡೆಯನ್ನು, ಶೋಷಿತರಿಗೆ ಸ್ವಾತಂತ್ರ್ಯವನ್ನು ನೀಡಲು, ಎಲ್ಲಾ ಜನರನ್ನು ಉದ್ಧರಿಸಲು ದೇವರು ನನ್ನನು ಅಭಿಷೇಕಿಸಿದ್ದಾರೆ “”**

ಶೋಷಿತರ, ಬಂಧಿತರ, ದೀನ ದಲಿತರ ಧ್ವನಿಯಾಗೋಣ…. ಸ್ಟ್ಯಾನ್ ಸ್ವಾಮಿಯವರ ಜಾಮೀನು ಅರ್ಜಿ ವಿಚಾರಣೆ ಆಗುವ ಮೊದಲೇ ದೈವದೀನರಾಗಿದ್ದಾರೆ. ಇಂತಹ ಹೋರಾಟಗಾರರಿಗಾಗಿ -ಪ್ರಜ್ಞಾವಂತ ನಾಗರಿಕರಾಗಿ ಅನ್ಯಾಯದ ವಿರುದ್ದ ಸದಾ ಧ್ವನಿ ಎತ್ತೋಣ.

ಕೃಪೆ: ಆದರ್ಶ್ ಜೋಸೆಫ್

ಇತ್ತೀಚಿನ ಸುದ್ದಿ