ಬಾಲಕನ ಮೇಲೆ ದಾಳಿ ನಡೆಸಿದ 8 ಬೀದಿನಾಯಿಗಳು | ಗಂಭೀರ ಗಾಯಗೊಂಡ ಬಾಲಕ ಸಾವು - Mahanayaka

ಬಾಲಕನ ಮೇಲೆ ದಾಳಿ ನಡೆಸಿದ 8 ಬೀದಿನಾಯಿಗಳು | ಗಂಭೀರ ಗಾಯಗೊಂಡ ಬಾಲಕ ಸಾವು

street dog
08/07/2021

ಧಾರವಾಡ: ಬೀದಿನಾಯಿಗಳ ದಾಳಿಯ ಪರಿಣಾಮ 6 ವರ್ಷದ ಬಾಲಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ  ಧಾರವಾಡ ಹೊರವಲಯದ ನವಲೂರ ಗ್ರಾಮದ ರೈಲು ನಿಲ್ದಾಣದ ಬಳಿ ನಡೆದಿದೆ.

ರಾಯಚೂರು ಜಿಲ್ಲೆಯ ಲಿಂಗಸೂರು ಮೂಲದ ಗೋಪಾಲ್ ಮತ್ತು ಚನ್ನಮ್ಮ ದಂಪತಿಯ 6 ವರ್ಷ ವಯಸ್ಸಿನ ಮಗ  ಬಾಬೂಲ್ ರಾಠೋಡ ಮೃತ ಬಾಲಕನಾಗಿದ್ದು, ಗುರುವಾರ ಧಾರವಾಡ ಹೊರವಲಯದ ನವಲೂರ ಗ್ರಾಮದ ರೈಲು ನಿಲ್ದಾಣದ ಬಳಿ ಕಟ್ಟಡವೊಂದರ ನಿರ್ಮಾಣ ಕೆಲಸಕ್ಕೆ ಆಗಮಿಸಿದ್ದರು ಎನ್ನಲಾಗಿದೆ.

ಬೆಳಗ್ಗೆ ತಿಂಡಿ ತಿನ್ನಲೆಂದು ಕೆಲಸದ ಜಾಗದಲ್ಲಿ ಬಾಲಕನ್ನು ಬಿಟ್ಟು ಪಾಲಕರು ಹೋಗಿದ್ದರು. ಈ ವೇಳೆ ಅಲ್ಲೇ ಆಟವಾಡಿಕೊಂಡಿದ್ದ ಬಾಲಕನ ಮೇಲೆ 8 ನಾಯಿಗಳು ಏಕಾಏಕಿ ದಾಳಿ ಮಾಡಿದ್ದು, ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ