ಪರಪ್ಪನ ಅಗ್ರಹಾರ ಕಾರಗೃಹದ ಮೇಲೆ ಸಿಸಿಬಿ ದಾಳಿ: ಕೈದಿಗಳಿಂದ ಪೊಲೀಸರು ಏನೇನು ವಶಪಡಿಸಿಕೊಂಡಿದ್ದಾರೆ ಗೊತ್ತಾ? - Mahanayaka
10:53 PM Wednesday 11 - December 2024

ಪರಪ್ಪನ ಅಗ್ರಹಾರ ಕಾರಗೃಹದ ಮೇಲೆ ಸಿಸಿಬಿ ದಾಳಿ: ಕೈದಿಗಳಿಂದ ಪೊಲೀಸರು ಏನೇನು ವಶಪಡಿಸಿಕೊಂಡಿದ್ದಾರೆ ಗೊತ್ತಾ?

parappana agrahara
10/07/2021

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕಾರಗೃಹದ ಮೇಲೆ ಸಿಸಿಬಿ ಪೊಲೀಸರು ಶನಿವಾರ ದಿಢೀರ್ ದಾಳಿ ನಡೆಸಿದ್ದು, ಈ ವೇಳೆ ಕೈದಿಗಳ ಬಳಿಯಲ್ಲಿ ಮೊಬೈಲ್ ಗಳು, ಸಿಮ್ ಕಾರ್ಡ್ ಗಳು, ಗಾಂಜಾ, ಚಾಕು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

 

ಕಾರಾಗೃಹದಲ್ಲಿರುವ ಕೈದಿಗಳು ಮೊಬೈಲ್ ಬಳಸುತ್ತಿದ್ದಾರೆ, ಅಲ್ಲಿಂದಲೇ ಅಪರಾಧ ಕೃತ್ಯಗಳನ್ನು ಎಸಗಲು ಸಂಚು ರೂಪಿಸುತ್ತಿದ್ದಾರೆ, ಮಾದಕ ವಸ್ತುಗಳನ್ನು ಸೇವಿಸುತ್ತಿದ್ದಾರೆ ಎನ್ನುವ ಮಾಹಿತಿಯ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿದೆ ಎಂದು ಹೇಳಲಾಗಿದೆ.

 

ಜೈಲಿನ ಹೊರಗಿನಿಂದ ಕೈದಿಗಳಿಗೆ ಮಾದಕ ವಸ್ತುಗಳು ಪೂರೈಕೆ ಆಗುತ್ತಿರುವುದು ತಿಳಿದು ಬಂದಿದೆ ಎಂದು ಹೇಳಲಾಗಿದ್ದು, ಈ ಸಂಬಂಧ ಜೈಲು ಸಿಬ್ಬಂದಿಯನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

 

ಇನ್ನೂ ಬೆಂಗಳೂರಿನ ಕೆಲವು ರೌಡಿಗಳ ಮನೆಗಳ ಮೇಲೆಯೂ ಪೊಲೀಸರು ದಾಳಿ ನಡೆಸಿದ್ದಾರೆನ್ನಲಾಗಿದ್ದು, ಮಾರಕಾಸ್ತ್ರಗಳು ಹಾಗೂ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ