ಹಿತೈಷಿಗಳು, ಮಠಾಧೀಶರು ಸುಮ್ಮನಿರಪ್ಪ ಎಂದಿದ್ದಾರೆ | ರಮೇಶ್ ಜಾರಕಿಹೊಳಿ ಯೂಟರ್ನ್
10/07/2021
ಬೆಳಗಾವಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದ ರಮೇಶ್ ಜಾರಕಿಹೊಳಿ ಯುಟರ್ನ್ ಹೊಡೆದಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮುಗಿದ ಅಧ್ಯಾಯ ಎಂದು ಹೇಳಿದ್ದಾರೆ.
ಗೋಕಾಕ್ ನ ಅಂಕಲಗಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ನಿರ್ಧರಿಸಿದ್ದು ನಿಜ. ಆದರೆ ಕೆಲವು ಹಿತೈಷಿಗಳು, ಮಠಾಧೀಶರು ಸುಮ್ಮನಿರಪ್ಪ ಎಂದಿದ್ದಾರೆ ಹಾಗಾಗಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಅವರು ಹೇಳಿದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರದಲ್ಲಿ ರಾಜಕಾರಣ ಇರಲಿಲ್ಲ. ವೈಯಕ್ತಿಕವಾಗಿ ಬೇರೆ ಕಾರಣಗಳಿತ್ತು. ಹಿತೈಷಿಗಳು, ಮಠಾಧೀಶರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬೇಡ ಎಂದಿದ್ದಕ್ಕೆ ತಡೆದ ಹಿಡಿದಿದ್ದೇನೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.