ಅಮಾವಾಸ್ಯೆ ದಿನವೇ ಮಂತ್ರವಾದಿಗಳಿಗೆ ಬ್ಯಾಡ್ ಲಕ್: ಮಾಟ ಮಾಡುತ್ತಿದ್ದವರ ಆಟ ನಿಲ್ಲಿಸಿದ ಸಾರ್ವಜನಿಕರು - Mahanayaka
5:09 AM Tuesday 10 - December 2024

ಅಮಾವಾಸ್ಯೆ ದಿನವೇ ಮಂತ್ರವಾದಿಗಳಿಗೆ ಬ್ಯಾಡ್ ಲಕ್: ಮಾಟ ಮಾಡುತ್ತಿದ್ದವರ ಆಟ ನಿಲ್ಲಿಸಿದ ಸಾರ್ವಜನಿಕರು

manthravadi
10/07/2021

ಚಿಕ್ಕಬಳ್ಳಾಪುರ: ಅಮಾವಾಸ್ಯೆ ದಿನದಂದು ನಾಲ್ಕು ಜನ ಮಂತ್ರವಾದಿಗಳು  ಸ್ಮಶಾನದಲ್ಲಿ ಮಾಟ ಮಂತ್ರ ಮಾಡುವ ಮೂಲಕ ಸಾರ್ವಜನಿಕರನ್ನು ಭಯಭೀತಗೊಳಿಸಿದ್ದು, ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಮಂತ್ರವಾದಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಹೊರವಲಯದಲ್ಲಿರುವ ಮೈಲಾಪಾನಳ್ಳಿ ಗ್ರಾಮದ ಸ್ಮಶಾನದಲ್ಲಿ ನಾಲ್ವರು ಮಂತ್ರವಾದಿಗಳು ಮಾಟ ಮಂತ್ರ ನಡೆಸುತ್ತಿದ್ದು, ಕಂಡು ಬಂದಿದ್ದು, ಸ್ಮಶಾನದಲ್ಲಿ ಕೋಳಿ ಮೊಟ್ಟೆ ಹಾಗೂ ನಿಂಬೆ ಹಣ್ಣು ಇಟ್ಟು, ಕೋಳಿ ಕೊಯ್ದು ಬೊಂಬೆಗೆ ರಕ್ತದ ಅಭಿಷೇಕ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಮಂತ್ರವಾದಿಗಳ ವರ್ತನೆ ಕಂಡು ಸಾರ್ವಜನಿಕರು ಬೆಚ್ಚಿ ಬಿದ್ದಿದ್ದು, ಪೊಲೀಸರಿಗೆ ಕರೆ ಮಾಡಿ ಮಾಟ ಮಂತ್ರಕ್ಕೆ ಗತಿ ಕಾಣಿಸಿದ್ದು, ನಾಲ್ವರು ಮಂತ್ರವಾದಿಗಳನ್ನು ಪೊಲೀಸರಿಗೆ  ಹಿಡಿದುಕೊಟ್ಟಿದ್ದಾರೆ. ಇದೀಗ ಮಂತ್ರವಾದಿಗಳು ಕಂಬಿ ಎಣಿಸುತ್ತಿದ್ದಾರೆ.

ಇವರು ಯಾರಿಗೋಸ್ಕರವಾಗಿ ಈ ಕೃತ್ಯವನ್ನು ನಡೆಸುತ್ತಿದ್ದರು ಎನ್ನುವುದು ತಿಳಿದು ಬಂದಿಲ್ಲ. ಮಾಟ ಮಂತ್ರದ ಹೆಸರಿನಲ್ಲಿ ಅನಗತ್ಯವಾಗಿ ಅಮಾಯಕ ಜನರನ್ನು ಭೀತಿಗೊಳಿಸುವವರಿಗೆ ತಕ್ಕ ಶಾಸ್ತಿಯಾಗಬೇಕು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ