ನಟ ದರ್ಶನ್ ಗೆ 25 ಕೋಟಿ ರೂಪಾಯಿ ವಂಚಿಸಲು ಯತ್ನ! - Mahanayaka
1:21 AM Wednesday 11 - December 2024

ನಟ ದರ್ಶನ್ ಗೆ 25 ಕೋಟಿ ರೂಪಾಯಿ ವಂಚಿಸಲು ಯತ್ನ!

darshan
11/07/2021

ಮೈಸೂರು: ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ನಟ ದರ್ಶನ್ ಅವರನ್ನು ವಂಚಿಸಲು ಮಹಿಳೆಯೊಬ್ಬರು ಯತ್ನಿಸಿದ್ದು,  ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಕಲಿ ಬ್ಯಾಂಕ್ ಮ್ಯಾನೇಜರ್ ನನ್ನು ವಶಕ್ಕೆ ಪಡೆದಿದ್ದಾರೆ.

ಈ ಮಹಿಳೆಯು ನಿರ್ಮಾಪಕ ಉಮಾಪತಿ ಹಾಗೂ ಶ್ರೀನಿವಾಸ್ ಗೌಡ ಜೊತೆಗೆ ನಟ ದರ್ಶನ್ ಅವರ ಬಳಿ ಲೋನ್ ವಿಚಾರವಾಗಿ ಮಾತನಾಡಲು ತೆರಳಿದ್ದರು ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ತಾನು ಬ್ಯಾಂಕ್ ಮ್ಯಾನೇಜರ್ ಆಗಿದ್ದು,  ನಿಮ್ಮ ಕೆಲವು ಸ್ನೇಹಿತರು ನಿಮ್ಮ ಶ್ಯೂರಿಟಿಯಲ್ಲಿ 25 ಕೋಟಿ ರೂಪಾಯಿ ಸಾಲ ಪಡೆಯಲು  ಅರ್ಜಿ ಹಾಕಿದ್ದಾರೆ. ಹಾಗಾಗಿ ಮಾಹಿತಿ ಪಡೆಯಲು ನಾನು ಬಂದಿದ್ದೇನೆ ಎಂದು ಹೇಳಿದ್ದಾಳೆ ಎಂದು ಹೇಳಲಾಗಿದೆ.

ಈ ವಿಚಾರ ತಿಳಿದ ನಟ ದರ್ಶನ್ ನನ್ನ ಹೆಸರಿನಲ್ಲಿ ಯಾರೂ ಲೋನ್ ಗೆ ಅರ್ಜಿ ಹಾಕಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿಕೊಂಡ ಬಳಿಕ ಮೈಸೂರಿನ ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದ್ದು, ಈ ಸಂಬಂಧ ದೂರು ದಾಖಳಿಸಿಕೊಂಡಿರುವ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ಮಹಿಳೆಯನ್ನು ದರ್ಶನ್ ಬಳಿಗೆ ಕರೆ ತಂದಿದ್ದ ಉಮಾಪತಿ ಹಾಗೂ ಶ್ರೀನಿವಾಸ್ ಗೌಡ ಅವರನ್ನು ಕೂಡ ಕರೆಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ನಿರೀಕ್ಷಿಲಾಗುತ್ತಿದೆ.

ಇತ್ತೀಚಿನ ಸುದ್ದಿ