ಎರಡೂವರೆ ವರ್ಷದ  ಮಗುವನ್ನು ಅಪಹರಿಸಿದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು! - Mahanayaka
1:28 PM Wednesday 11 - December 2024

ಎರಡೂವರೆ ವರ್ಷದ  ಮಗುವನ್ನು ಅಪಹರಿಸಿದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು!

udupi kidnep
12/07/2021

ಉಡುಪಿ: ನಿನ್ನೆ ಉಡುಪಿ ಕರಾವಳಿ ಸರ್ಕಲ್ ಬಳಿಯಿಂದ ಎರಡೂವರೆ ವರ್ಷದ ಮಗುವನ್ನು ಅಪಹರಣ ಮಾಡಿದ್ದ ಆರೋಪಿಯನ್ನು  ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ,

ಬಾಗಲಕೋಟೆ ಮೂಲದ ದಂಪತಿಯ ಎರಡೂವರೆ ವರ್ಷ ವಯಸ್ಸಿನ ಮಗುವನ್ನು ಭಾನುವಾರ ಪರಶು ಎಂಬಾತ ಅಪಹರಿಸಿದ್ದು, ಮಗುವಿನೊಂದಿಗೆ ಕುಂದಾಪುರ ಬಸ್ ಗೆ ಏರುತ್ತಿರುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿತ್ತು.

ಪ್ರಕರಣ ಮಾಹಿತಿ ದೊರೆಯುತ್ತಿದ್ದಂತೆಯೇ  ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು,  ಭಟ್ಕಳದ ರೈಲ್ವೆ ನಿಲ್ದಾಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಉಡುಪಿ ನಗರ ಠಾಣೆ ಪಿಎಸ್ ಐ ಅಶೋಕ್ ಕುಮಾರ್ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಬಾಗಲಕೋಟೆ ಮೂಲದ ಅರುಣ್ ಹಾಗೂ ಭಾರತಿ ದಂಪತಿಯ ಮಗ ಶಿವರಾಜ್ ನನ್ನು ಪರಶು ಎಂಬಾತ ಅಪಹರಿಸಿದ್ದು, ಮಗುವಿನೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಪರಶು ಭಾನುವಾರ ಬೆಳಗ್ಗೆ ತಿಂಡಿಕೊಡಿಸುವುದಾಗಿ ಮಗುವನ್ನು ಕರೆದುಕೊಂಡು ಹೋದಾತ ಮತ್ತೆ ವಾಪಸ್ ಬಂದಿರಲಿಲ್ಲ .

ಇನ್ನಷ್ಟು ಸುದ್ದಿಗಳು:

ಹಾಡಹಗಲೇ ಸಮಾಜವಾದಿ ಪಕ್ಷದ ಕಾರ್ಯಕರ್ತೆಯ ಸೀರೆ ಎಳೆದ ಬಿಜೆಪಿ ಕಾರ್ಯಕರ್ತರು

ಮಹಿಳೆಯನ್ನು ಅಪಹರಿಸಿ ಲಾಡ್ಜ್ ನಲ್ಲಿ ಕ್ರೂರ ಲೈಂಗಿಕ ಹಿಂಸೆ ನೀಡಿದ ಗ್ಯಾಂಗ್ | ಬೆಚ್ಚಿಬೀಳಿಸಿದ ಘಟನೆ

ಅಪ್ರಾಪ್ತೆಗೆ ಮಾದಕ ವ್ಯಸನ ಕಲಿಸಿ ಲೈಂಗಿಕ ದೌರ್ಜನ್ಯ: ಬೆಚ್ಚಿ ಬೀಳಿಸಿದ ಯುವಕರ ಗ್ಯಾಂಗ್ ನ ಕೃತ್ಯ

ಬಾಡಿಗೆ ಬೇಡ, ಆಸೆ ಪೂರೈಸು ಎಂದು ಮನೆ ಮಾಲಿಕನಿಂದ ಮಹಿಳೆಗೆ ಕಿರುಕುಳ

ಇತ್ತೀಚಿನ ಸುದ್ದಿ