ಆಟವಾಡುತ್ತಿದ್ದ ಬಾಲಕಿ ಏಕಾಏಕಿ ಕುಸಿದು ಸಾವು | ಜೀವ ತೆಗೆಯಿತು ಮಿಕ್ಷರ್ - Mahanayaka
2:11 AM Wednesday 11 - December 2024

ಆಟವಾಡುತ್ತಿದ್ದ ಬಾಲಕಿ ಏಕಾಏಕಿ ಕುಸಿದು ಸಾವು | ಜೀವ ತೆಗೆಯಿತು ಮಿಕ್ಷರ್

niveditha
12/07/2021

ತಿರುವನಂತಪುರಂ: ನಿನ್ನೆಯಷ್ಟೇ ಶ್ವಾಸಕೋಶದಲ್ಲಿ ಜೀರುಂಡೆ ಸಿಲುಕಿಕೊಂಡು ಬಾಲಕನೋರ್ವ ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ನಡೆದಿತ್ತು. ಇದರ ಬೆನ್ನಲ್ಲೇ ಇದೀಗ ಗಂಟಲಲ್ಲಿ ಮಿಕ್ಷರ್ ಸಿಕ್ಕಿಹಾಕಿಕೊಂಡು ಬಾಲಕಿಯೋರ್ವಳು ಮೃತಪಟ್ಟ ದಾರುಣ ಘಟನೆ ನಡೆದಿದೆ.

ಕೇರಳದ ತಿರುವನಂತಪುರಂನ ಕಾಟನ್ಹಿಲ್ ಶಾಲೆಯ ವಿದ್ಯಾರ್ಥಿನಿ ನಿವೇದಿತಾ ಮೃತಪಟ್ಟ ಬಾಲಕಿಯಾಗಿದ್ದು, ಈಕೆ ಆಟೋ ಚಾಲಕ ರಾಜೇಶ್ ಎಂಬವರ ಏಕೈಕ ಪುತ್ರಿಯಾಗಿದ್ದಾಳೆ ಎಂದು ವರದಿಯಾಗಿದೆ.

ನಿನ್ನೆ ರಾತ್ರಿ 6 ಗಂಟೆಯ ಸುಮಾರಿಗೆ ಮನೆಯೊಳಗೆ ಆಟವಾಡುತ್ತಿದ್ದ ಬಾಲಕಿ ಏಕಾಏಕಿ ಕುಸಿದು ಬಿದ್ದಿದ್ದಾಳೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ತಕ್ಷಣವೇ ಬಾಲಕನನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಬಾಲಕಿ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾಳೆ.

ಆಟವಾಡುತ್ತಾ, ಬಾಲಕಿ ಮಿಕ್ಷರ್ ತಿನ್ನುತ್ತಿದ್ದಳು ಎಂದು ಹೇಳಲಾಗಿದೆ. ಇದರಿಂದಾಗಿ ಗಂಟಲಲ್ಲಿ ಮಿಕ್ಷರ್ ಸಿಕ್ಕಿಹಾಕಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮಗುವನ್ನು ಕಳೆದುಕೊಂಡಿರುವ ಪೋಷಕರ ರೋದನೆ ಮುಗಿಲು ಮುಟ್ಟಿದೆ.

ಇನ್ನಷ್ಟು ಸುದ್ದಿಗಳು:

ಲೋನ್ ಬೇಕಾದ್ರೆ ಲೈಂಗಿಕ ಆಸೆ ತೀರಿಸ್ಬೇಕು: ವಿಡಿಯೋ ವೈರಲ್ ಬಳಿಕ ಬಯಲಾಯ್ತು ಬ್ಯಾಂಕ್ ಮ್ಯಾನೇಜರ್ ನ ಅಸಲಿ ಮುಖ

ಪುರುಷರು ಹೆಚ್ಚಾಗಿ ಗೂಗಲ್ ನಲ್ಲಿ ಏನನ್ನು ಹುಡುಕುತ್ತಾರೆ ಗೊತ್ತಾ? | ಹೊಸ ಸಮೀಕ್ಷೆ

ಶೀತ-ನೆಗಡಿಯಿಂದ 3 ಮಕ್ಕಳು ಸಾವು, 14 ಮಂದಿ ಗಂಭೀರ | ಬಂದೇ ಬಿಟ್ಟಿತೇ 3ನೇ ಅಲೆ?

ಟ್ರ್ಯಾಕ್ಟರ್ ಹರಿದು ಬಾಲಕ ಸಾವು; ಮನನೊಂದ ಚಾಲಕ ಆತ್ಮಹತ್ಯೆಗೆ ಶರಣು

ಅಪಘಾತದ ಬಳಿಕ ಸ್ಥಳದಲ್ಲಿ ಕುಸಿದು ಬಿದ್ದಿದ್ದ ಜಗ್ಗೇಶ್ ಪುತ್ರ ಯತಿರಾಜ್

ಇತ್ತೀಚಿನ ಸುದ್ದಿ