ಮಗಳು ಮೃತಪಟ್ಟು ಒಂದು ಗಂಟೆಯೊಳಗೆ ತಂದೆಯೂ ಸಾವು! - Mahanayaka
6:15 AM Thursday 12 - December 2024

ಮಗಳು ಮೃತಪಟ್ಟು ಒಂದು ಗಂಟೆಯೊಳಗೆ ತಂದೆಯೂ ಸಾವು!

kavya rama gonda
12/07/2021

ಭಟ್ಕಳ: ಮಗಳು ಮೃತಪಟ್ಟ ಒಂದೇ ಗಂಟೆಯಲ್ಲಿ ತಂದೆಯೂ ಮೃತಪಟ್ಟ ಘಟನೆ ಭಟ್ಕಳದ ಮಾರುಕೇರಿಯಲ್ಲಿ ನಡೆದಿದ್ದು, ಇಬ್ಬರ ಸಾವನ್ನು ಸಹಿಸಲಾರದೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

 46 ವರ್ಷ ವಯಸ್ಸಿನ ಮಾರುಕೇರಿ ಹೆಜ್ಜಲು ನಿವಾಸಿ ರಾಮ ಸುಕ್ರಗೊಂಡ ಹಾಗೂ ಅವರ 15 ವರ್ಷದ ಪುತ್ರಿ ಕಾವ್ಯಾ ರಾಮಗೊಂಡ ಮೃತಪಟ್ಟವರಾಗಿದ್ದು, ಪುತ್ರಿ ಕಾವ್ಯ, ತಾಲೂಕಿನ ಕಿತ್ತೂರು ರಾಣಿ ಚನ್ನಮ್ಮಾ ವಸತಿ ಶಾಲೆಯ ವಿದ್ಯಾರ್ಥಿಯಾಗಿದ್ದು, ವಸತಿ ಶಾಲೆ ಮುಚ್ಚಿದ್ದರಿಂದ ಮನೆಯಲ್ಲಿಯೇ ಅಭ್ಯಾಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

 ಸೋಮವಾರ ಬೆಳಗ್ಗಿನ ಜಾವ ಕಾವ್ಯಾಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

 ಇನ್ನೂ ತಂದೆ ರಾಮಗೊಂಡ ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಗಳು ಮೃತಪಟ್ಟು ಒಂದು ಗಂಟೆಯ ಅವಧಿಯಲ್ಲಿ ಅವರು ಕೂಡ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇನ್ನಷ್ಟು ಸುದ್ದಿಗಳು:

 

ಶ್ವಾಸನಾಳದಲ್ಲಿ ಜೀರುಂಡೆ ಸಿಲುಕಿ 1 ವರ್ಷದ ಮಗು ದಾರುಣ ಸಾವು

ಆಟವಾಡುತ್ತಿದ್ದ ಬಾಲಕಿ ಏಕಾಏಕಿ ಕುಸಿದು ಸಾವು | ಜೀವ ತೆಗೆಯಿತು ಮಿಕ್ಷರ್

ಇತ್ತೀಚಿನ ಸುದ್ದಿ