ಲವ್ ಜಿಹಾದ್ ಹೆಸರಿನಲ್ಲಿ ದಿವ್ಯಾಂಗ ಯುವತಿಯ ಮದುವೆ ಮುರಿದು ಬಿತ್ತು! - Mahanayaka
6:33 PM Wednesday 11 - December 2024

ಲವ್ ಜಿಹಾದ್ ಹೆಸರಿನಲ್ಲಿ ದಿವ್ಯಾಂಗ ಯುವತಿಯ ಮದುವೆ ಮುರಿದು ಬಿತ್ತು!

marriage
13/07/2021

ಮುಂಬೈ: ಹಿಂದೂ ಯುವತಿ ಹಾಗೂ ಮುಸ್ಲಿಮ್ ಯುವಕ ಮದುವೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ ಬಳಿಕ ಬೆದರಿದ ಕುಟುಂಬ  ನಿಗದಿಯಾಗಿದ್ದ ಮದುವೆಯನ್ನು ಅನಿವಾರ್ಯವಾಗಿ ರದ್ದುಪಡಿಸಿದ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದಿದೆ.

ನಾಸಿಕ್ ನಗರದ 28 ವರ್ಷ ವಯಸ್ಸಿನ ರಸಿಕಾ ಹಾಗೂ  ಆಸೀಫ್ ಎಂಬ ಯುವಕನ ಜೊತೆಗೆ ಮದುವೆ ನಿಶ್ಚಯವಾಗಿತ್ತು. ರಸಿಕಾ ದಿವ್ಯಾಂಗಳಾಗಿದ್ದರೂ, ಆಸಿಫ್ ಆಕೆಯನ್ನು ಮದುವೆಯಾಗಲು ಒಪ್ಪಿಗೆ ನೀಡಿದ್ದಾನೆ. ಎರಡು ಕುಟುಂಬಗಳು ಕೂಡ ಮದುವೆಗೆ ಒಪ್ಪಿಗೆ ನೀಡಿದ ಬಳಿಕ ಮದುವೆಗೆ ಆಹ್ವಾನ ಪತ್ರಿಕೆ ಪ್ರಿಂಟ್ ಆಗಿತ್ತು. ಈ ಆಹ್ವಾನ ಪತ್ರಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದ್ದು, ಇದು ಲವ್ ಜಿಹಾದ್ ಎಂದು ವದಂತಿ ಹಬ್ಬಲಾಗಿತ್ತು. ಇದರಿಂದಾಗಿ ಯುವತಿ ಹಾಗೂ ಯುವಕನ ಮನೆಯವರಿಗೆ ತೀವ್ರ ಬೆದರಿಕೆಗಳು ಬಂದಿದ್ದು, ಬೆದರಿಕೆಗಳಿಗೆ ಹೆದರಿ ಕುಟುಂಬಸ್ಥರು ವಿವಾಹವನ್ನು ರದ್ದುಪಡಿಸಿದ್ದಾರೆ.

ಇಲ್ಲಿ ಯಾವುದೇ ಬಲವಂತದ ಧರ್ಮ ಪರಿವರ್ತನೆ ನಡೆಯುತ್ತಿಲ್ಲ.  ನನ್ನ ಮಗಳು ದಿವ್ಯಾಂಗಳಾಗಿದ್ದು, ಹೀಗಾಗಿ ಆಕೆಯ ವಿವಾಹ ವಿಳಂಬವಾಗಿದೆ. ಕೊನೆಗೆ ಆಕೆ ಇಷ್ಟಪಟ್ಟ ಹುಡುಗನ ಜೊತೆಗೆ ಮದುವೆ ಮಾಡಲು ನಾವು ನಿರ್ಧರಿಸಿದ್ದೆವು. ಆಸಿಫ್ ಕುಟುಂಬಸ್ಥರೂ ಇದಕ್ಕೆ ಒಪ್ಪಿಕೊಂಡು ಹಿಂದೂ ಸಂಪ್ರದಾಯದ ಪ್ರಕಾರವೇ ಮದುವೆಯಾಗಲು ಒಪ್ಪಿಕೊಂಡಿದ್ದಾರೆ ಎಂದು ಯುವತಿಯ ತಂದೆ ತೀವ್ರ ನೋವು ವ್ಯಕ್ತಪಡಿಸಿದ್ದಾರೆ.

ರಸಿಕಾ ದಿವ್ಯಾಂಗಳಾಗಿದ್ದರಿಂದಾಗಿ ಆಕೆಯನ್ನು ಮದುವೆಯಾಗಲು ಸ್ವಧರ್ಮೀಯ ಜಾತಿಯವರೇ ಮುಂದಾಗಿರಲಿಲ್ಲ. ಇದೀಗ ಆಕೆ ಇಷ್ಟಪಟ್ಟ ವರನೊಂದಿಗೆ ವಿವಾಹವಾಗಲು, ಇವರ ಕುಟುಂಬಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲದ ವ್ಯಕ್ತಿಗಳು ಅಡ್ಡವಾಗಿದ್ದಾರೆ. ಕನಿಷ್ಠ ಮಾನವೀಯತೆಯೂ ಇಲ್ಲದೇ, ಲವ್ ಜಿಹಾದ್ ಎನ್ನುವ ಭಾವನಾತ್ಮಕ ವಿಚಾರ ಬಳಸಿ ಒಂದು ದಿವ್ಯಾಂಗ ಯುವತಿಯ ಬಾಳನ್ನು ಸರ್ವನಾಶ ಮಾಡಿದ್ದಾರೆ ಎನ್ನುವ ಆಕ್ರೋಶದ ಮಾತುಗಳು ಪ್ರಜ್ಞಾವಂತರಿಂದ ಕೇಳಿ ಬಂದಿದೆ.

ಇನ್ನಷ್ಟು ಸುದ್ದಿಗಳು:

ಇದು ಲವ್ ಜಿಹಾದ್ ಅಲ್ಲ, ಜಾತಿ ಭಯೋತ್ಪಾದನೆ | ಪ್ರೀತಿಸಿ ಅಂತರ್ಜಾತಿ ವಿವಾಹವಾದ ಜೋಡಿ, ಆ ಮೇಲೆ ನಡೆದದ್ದೇನು ಗೊತ್ತಾ?

ಉದ್ಯಮಿ ಗಂಗಾಧರನ ಕಾಮಲೀಲೆಯನ್ನು ಲವ್ ಜಿಹಾದ್ ಎಂದರು!

ಇತ್ತೀಚಿನ ಸುದ್ದಿ