ಐಷಾರಾಮಿ ಕಾರಿನ ಮೇಲೆ ಕುಳಿತು ಫೋಟೋ ಶೂಟ್: ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಂಕಷ್ಟಕ್ಕೀಡಾದ ವಧು! - Mahanayaka
11:07 PM Wednesday 11 - December 2024

ಐಷಾರಾಮಿ ಕಾರಿನ ಮೇಲೆ ಕುಳಿತು ಫೋಟೋ ಶೂಟ್: ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಂಕಷ್ಟಕ್ಕೀಡಾದ ವಧು!

photoshoot
14/07/2021

ಪುಣೆ: ಐಷಾರಾಮಿ ಕಾರಿನ ಬಾನೆಟ್ ಮೇಲೆ ಕುಳಿತು ಫೋಟೋ ಶೂಟ್ ಮಾಡಿದ ಮದುಮಗಳು ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮಹಾರಾಷ್ಟ್ರದ ಪುಣೆಯಲ್ಲಿರುವ ದಿವಾ ಘಾಟ್ ಬಳಿಯಲ್ಲಿ ಶೂಟಿಂಗ್ ನಡೆಸಲಾಗಿತ್ತು.

23 ವರ್ಷ ವಯಸ್ಸಿನ ವಧು ಶುಭಂಗಿ ಕಾರಿನ ಬಾನೆಟ್ ಮೇಲೆ ಕುಳಿತುಕೊಂಡು ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ್ದಳು. ಈ ವೇಳೆ ರಸ್ತೆ ನಿಯಮ ಹಾಗೂ ಕೊವಿಡ್ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ವಧು ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಾಗಿದೆ.

ವಧುವೋರ್ವಳು ಐಷಾರಾಮಿ ಕಾರಿನಲ್ಲಿ ಕುಳಿತುಕೊಂಡು ಫೋಟೋ ಶೂಟ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.  ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿದ್ದ ಲೂನಿ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ವಧು ಶುಭಂಗಿ ಶಾಂತಾರಾಮ್, ಡ್ರೈವರ್ ಗಣೇಶ್, ವಿಡಿಯೋ ಗ್ರಾಫರ್ ತುಕಾರಾಂ ಹಾಗೂ ಮತ್ತಿತರರ ವಿರುದ್ಧ ಐಪಿಸಿ ಸೆಕ್ಷನ್ 269, 188, 269, 107, 336, 34ರ ಅಡಿ ಎಫ್ ಐ ಆರ್ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಳು:

ಎಲ್ಲಾ ಫೋಟೋ ಶೂಟ್ ಆಯ್ತು… ಈಗ ಫಸ್ಟ್ ನೈಟ್ ಫೋಟೋಶೂಟ್!

ಬಾಲ್ಕನಿಯಲ್ಲಿ ನಗ್ನವಾಗಿ ನಿಂತು ಫೋಟೋಶೂಟ್ ಮಾಡಿದ ಯುವತಿಯರಿಗೆ ಈಗ ಸಂಕಷ್ಟ!

ಕಸದ ಗಾಡಿಯಲ್ಲಿ ಬೆತ್ತಲಾಗಿ ಕುಳಿತು ಫೋಟೋಶೂಟ್ ಮಾಡಿದ ಪರಿಣಿತಿ ಚೋಪ್ರಾ

ತುಂಡುಡುಗೆಯಲ್ಲಿ ಫೋಟೋಗೆ ಪೋಸ್ ನೀಡಿ ಅಭಿಮಾನಿಗಳ ಹೃದಯ ಕದ್ದ ಶ್ರುತಿ ಹಾಸನ್

ಫೋಟೋ ಶೂಟ್ ಗೆ ಪೋಸ್ ನೀಡಿದ ತುಂಬು ಗರ್ಭಿಣಿ ಮಯೂರಿ

 

ಇತ್ತೀಚಿನ ಸುದ್ದಿ