ರಾಜಕೀಯಕ್ಕೆ ಕಾಲಿಡುತ್ತಾರಾ ರವಿ ಡಿ.ಚೆನ್ನಣ್ಣನವರ್? | ಏನಿದು ಹೊಸ ಚರ್ಚೆ? - Mahanayaka
1:08 AM Wednesday 11 - December 2024

ರಾಜಕೀಯಕ್ಕೆ ಕಾಲಿಡುತ್ತಾರಾ ರವಿ ಡಿ.ಚೆನ್ನಣ್ಣನವರ್? | ಏನಿದು ಹೊಸ ಚರ್ಚೆ?

ravi d channannanavar
14/07/2021

ಬೆಂಗಳೂರು: ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ತಮಿಳುನಾಡು ರಾಜಕೀಯ ಪ್ರವೇಶಿಸಿದ್ದರು. ಇದೀಗ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಇದರ ಬೆನ್ನಲ್ಲೇ ಇನ್ನೊಂದು ಚರ್ಚೆ ಆರಂಭವಾಗಿದ್ದು, ಇನ್ನೋರ್ವ ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಅವರು ಕೂಡ ರಾಜಕೀಯಕ್ಕೆ ಧುಮುಕಲಿದ್ದಾರೆ  ಎನ್ನಲಾಗುತ್ತಿದೆ.

ಅಣ್ಣಾಮಲೈ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಅವಧಿಯಲ್ಲಿ ಕೂಡ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿತ್ತು. ಆದರೆ ಇದೀಗ ಮತ್ತೆ ಇದು ಮುನ್ನೆಲೆಗೆ ಬಂದಿದ್ದು, ರವಿ ಡಿ ಚೆನ್ನಣ್ಣನವರ್ ಅವರು ರಾಜಕೀಯಕ್ಕೆ ಬರುತ್ತಾರೆಯೇ? ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರವಿ ಡಿ.ಚೆನ್ನಣ್ಣನವರ್ ಅವರನ್ನು ಇತ್ತೀಚಿಗಷ್ಟೇ ರಾಜ್ಯ ಸರ್ಕಾರ ಸಿಐಡಿ ಎಸ್ಪಿಯಾಗಿ ವರ್ಗಾವಣೆ ಮಾಡಿ ಆದೇಶಿಸಿತ್ತು. ಪ್ರಸ್ತುತ ಸಿಐಡಿ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ರವಿ ಡಿ ಚೆನ್ನಣ್ಣನವರ್ ಅವರ ಮಠ ಯಾತ್ರೆ ಇದೀಗ, ಅವರು ರಾಜಕೀಯಕ್ಕೆ ಧುಮುಕುತ್ತಿದ್ದಾರೆಯೇ ಎನ್ನುವ ಚರ್ಚೆಗೆ ಇನ್ನಷ್ಟು ಬಿಸಿ ತಾಕಿಸಿದೆ.  ಚೆನ್ನಣ್ಣನವರ್ ಅವರು, ಚಿತ್ರದುರ್ಗದ ಬಸವ ಮಾಚಿದೇವ ಮಹಾಸ್ವಾಮಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ, ಕಾಗಿನೆಲೆ ಪೀಠಕ್ಕೆ ತೆರಳಿ, ನಿರಂಜನಾನಂದಪುರಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಇದಲ್ಲದೇ ಹರಿಹರ ಪೀಠದ ವಚನಾನಂದ ಶ್ರೀಗಳು, ಬೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರನ್ನು ಭೇಟಿಯಾಗಿ, ಆಶೀರ್ವಾದ ಪಡೆದಿದ್ದಾರೆ ಇದು ಅಣ್ಣಾಮಲೈ ಅವರಂತೆಯೇ ರವಿ ಚೆನ್ನಣ್ಣನವರ್ ಅವರು ಕೂಡ ರಾಜಕೀಯಕ್ಕೆ ಬರಲಿದ್ದಾರೆಯೇ ಎನ್ನುವ ನಿರೀಕ್ಷೆಗಳಿಗೆ ಕಾರಣವಾಗಿದೆ.

ಐಪಿಎಸ್ ಅಧಿಕಾರಿಗಳು ರಾಜಕೀಯಕ್ಕೆ ಬರಬೇಕು ಎಂದು ಸಾರ್ವಜನಿಕರು ಕೂಡ ಬಯಸುತ್ತಿದ್ದಾರೆ. ಪಕ್ಷ ಯಾವುದಾದರೂ ವಿದ್ಯಾವಂತರು ಅಧಿಕಾರದಲ್ಲಿದ್ದರೆ, ದುರಾಡಳಿತವನ್ನು ಕೊನೆಗಾಣಿಸಬಹುದು. ಅದರಲ್ಲೂ ಐಪಿಎಸ್ ಹುದ್ದೆಯಲ್ಲಿದ್ದು, ಸಾರ್ವಜನಿಕರ ಅಂತರಾಳವನ್ನು ಅರಿತಿರುವ ಐಪಿಎಸ್ ಅಧಿಕಾರಿಗಳು ರಾಜಕೀಯಕ್ಕೆ ಧುಮುಕುತ್ತಿರುವುದು ಸ್ವಾಗತಾರ್ಹ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಆದರೆ, ಚೆನ್ನಣ್ಣನವರ್ ಅವರು ರಾಜಕೀಯಕ್ಕೆ ಬರಲಿದ್ದಾರೆಯೇ ಎನ್ನುವುದು ಸದ್ಯ ಒಂದು ಚರ್ಚೆಯಾಗಿದೆಯೇ ಹೊರತು ಇನ್ನೂ ಸ್ಪಷ್ಟಗೊಂಡಿಲ್ಲ. ಈ ಬಗ್ಗೆ ಚನ್ನಣ್ಣನವರ್ ಅವರು ಸ್ಪಷ್ಟಪಡಿಸಿದಾಗಲೇ ಇದರ ಸತ್ಯಾಂಶ ತಿಳಿದುಬರಬೇಕಿದೆ ಎನ್ನಲಾಗುತ್ತಿದೆ.

ಇನ್ನಷ್ಟು ಸುದ್ದಿಗಳು:

ನಿಖಿಲ್ ರನ್ನು ಸುಮಲತಾ ಸೋಲಿಸಿದ್ದಕ್ಕೆ ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆ | ಸಿದ್ದರಾಮಯ್ಯ

ಆಪರೇಷನ್ ಕಮಲ ಆರೋಪದ ಬೆನ್ನಲ್ಲೇ ರೇವಣ್ಣ ಕಾಲಿಗೆ ನಮಸ್ಕರಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್!

ಜಿ.ಪಂ., ತಾ.ಪಂ. ಚುನಾವಣೆ: ರಾಜ್ಯದಲ್ಲಿ ಆರಂಭವಾಗಿದೆ ರಾಜಕೀಯ ಚಟುವಟಿಕೆ

 

ಇತ್ತೀಚಿನ ಸುದ್ದಿ