“ನೀನು ಹಿಂದೂ ಅಲ್ಲ, ಹೊರಗೆ ಹೋಗು ಕ್ರೈಸ್ತ ಯುವಕನಿಗೆ ತಾಕೀತು” | ಸಚಿವ ಅಂಗಾರರ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ? - Mahanayaka

“ನೀನು ಹಿಂದೂ ಅಲ್ಲ, ಹೊರಗೆ ಹೋಗು ಕ್ರೈಸ್ತ ಯುವಕನಿಗೆ ತಾಕೀತು” | ಸಚಿವ ಅಂಗಾರರ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ?

sullia
14/07/2021

ಸುಳ್ಯ: ದೈವಸ್ಥಾನದ ಆವರಣದಲ್ಲಿ ಯುವಕರು ಆಟವಾಡುತ್ತಿದ್ದ ವೇಳೆ ವ್ಯಕ್ತಿಯೋರ್ವ ಧರ್ಮದ ವಿಚಾರ ಎಳೆ ತಂದು ಯುವಕರ ನಡುವೆ ಹುಳಿ ಹಿಂಡಲು ಮುಂದಾದ ಘಟನೆ ಸುಳ್ಯದ ಜಯನಗರ ಬಳಿಯಲ್ಲಿ ನಡೆದಿದೆ.

ಹಿಂದೂ ಯುವಕರೊಂದಿಗೆ ಕ್ರೈಸ್ತ ಯುವಕನೋರ್ವ ದೈವಸ್ಥಾನದ ಆವರಣದಲ್ಲಿ ಆಟವಾಡುತ್ತಿದ್ದ ಈ ವೇಳೆ ಪ್ರವೀಣ್ ಎಂಬಾತ ಸ್ಥಳಕ್ಕೆ ಬಂದು ಯುವಕರ ನಡುವೆ ಧರ್ಮವನ್ನು ತಂದಿಟ್ಟು ವಿವಾದ ಸೃಷ್ಟಿಸಲು ಮುಂದಾಗಿದ್ದಾನೆ. ಆದರೆ, ಇದಕ್ಕೆ ಸ್ಥಳೀಯ ಯುವಕರೇ ವಿರೋಧ ವ್ಯಕ್ತಪಡಿಸಿದ್ದು, ತಾವೇ ಕ್ರೈಸ್ತ ಯುವಕನ ಜೊತೆಗೆ ನಿಂತಿದ್ದಾರೆ.

ದೈವಸ್ಥಾನದ ಆವರಣದಲ್ಲಿ ಅನ್ಯ ಧರ್ಮೀಯರು ಆಟವಾಡಬಾರದು, ಅವರು ಚರ್ಚ್ ಆವರಣದಲ್ಲಿ ಆಟವಾಡಲಿ, ಚರ್ಚ್ ಮೈದಾನದಲ್ಲಿ ಯಾರನ್ನಾದರೂ ಆಟವಾಡಲು ಬಿಡುತ್ತಾರೆಯೇ? ಹಿಂದೂಗಳು ಅನ್ಯ ಧರ್ಮೀಯರೊಂದಿಗೆ ಯಾಕೆ ಆಡುತ್ತಾರೆ? ಎಂದೆಲ್ಲ ಪ್ರವೀಣ್ ಎಂಬಾತ ಯುವಕರ ನಡುವೆ ಬೇಧ ಸೃಷ್ಟಿಸಲು ಮುಂದಾಗಿದ್ದಾನೆ. ಇದರ ಜೊತೆಗೆ ಗ್ರೌಂಡ್ ನಲ್ಲಿ ಆಟವಾಡುತ್ತಿದ್ದ ಇತರ ದಲಿತ ಯುವಕರನ್ನು ಏಕ ವಚನದಲ್ಲಿ, “ಇವನು ಎಸ್ಸಿ, ಅಲ್ವಾ?” ನಾನು ಇವರು ಇಲ್ಲಿ ಆಡುವುದಕ್ಕೆ ವಿರೋಧ ಮಾಡಿದ್ನಾ? ನಾನು ಎಂ ಎಲ್ ಎ ಜೊತೆ ಮಾತನಾಡಬೇಕಾ? ನನಗೆ ಯಾರ ಭಯವೂ ಇಲ್ಲ ಎಂದು ಜಾತಿಯ ವಿಚಾರವನ್ನೂ ತರಲು ಮುಂದಾಗಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಪ್ರವೀಣ್ ಎಂಬಾತ ಈ ವಿವಾದ ಸೃಷ್ಟಿಸುತ್ತಿರುವುದರಿಂದ ನೊಂದ ಕ್ರೈಸ್ತ ಯುವಕ, ಆತನ ಮನವೊಲಿಸಲು ಮಾತನಾಡಲು ಯತ್ನಿಸಿದಾಗ, ಪ್ರವೀಣ್ ಹಲ್ಲೆ ನಡೆಸಲು ಮುಂದಾಗಿದ್ದು, ಈ ವೇಳೆ ಜೊತೆಗಿದ್ದ ಯುವಕರು ಪ್ರವೀಣ್ ಗೆ ಎಚ್ಚರಿಕೆ ನೀಡಿ ಸುಮ್ಮನಾಗಿಸಿದ್ದಾರೆ. ಈ ವೇಳೆ ಆತ, “ನೀನು ಹಿಂದೂ ಅಲ್ಲ ಅಲ್ವಾ ಹೊರಗೆ ಹೋಗು” ಎಂದು ಹೇಳಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಊರಿನಲ್ಲಿ ಸೌಹಾರ್ದಯುತವಾಗಿ ಬದುಕುತ್ತಿರುವ ಯುವಕರ ಮನಸ್ಸಿನಲ್ಲಿ ದ್ವೇಷ ತುಂಬುವ ಪ್ರವೃತ್ತಿ ರಾಜ್ಯದಲ್ಲಿ ಕೂಡ ಹೆಚ್ಚಾಗುತ್ತಿದ್ದು, ಮುಂದಿನ ದಿನದಲ್ಲಿ ಕರ್ನಾಟಕ ಕೂಡ ಉತ್ತರಪ್ರದೇಶದ ಮಟ್ಟಕ್ಕೆ ಇಳಿದರೆ ಆಶ್ಚರ್ಯ ಇಲ್ಲ ಎನ್ನುವ ಮಾತುಗಳು ಸದ್ಯ ಕೇಳಿ ಬರುತ್ತಿದೆ.

ಸುಳ್ಯದಲ್ಲಿ ಜಾತಿ ಧರ್ಮ ಬೇಧವನ್ನು ಮರೆತು, ಬಿಜೆಪಿ ಅಭ್ಯರ್ಥಿಯಾಗಿರುವ ಅಂಗಾರರಿಗೆ ಪ್ರತಿ ಬಾರಿಯೂ ಜನತೆ ಮತ ನೀಡುತ್ತಿದ್ದಾರೆ. ಈ ಬಾರಿ ಅವರು ಸಚಿವರು ಕೂಡ ಆಗಿದ್ದಾರೆ. ಆದರೆ, ಅವರ ಕ್ಷೇತ್ರದಲ್ಲಿ ಈ ರೀತಿಯ ಕೋಮುವಾದ ನಡೆಯುತ್ತಿರುವುದು ಅವರಿಗೆ ಕಪ್ಪು ಚುಕ್ಕೆಯಾಗಿದೆ.

ಇನ್ನಷ್ಟು ಸುದ್ದಿಗಳು:

ಜಾತಿ ಭಯೋತ್ಪಾದಕರ ಅಟ್ಟಹಾಸ: ದಲಿತ ಯುವಕನ ಗುದದ್ವಾರಕ್ಕೆ ಕೋಲು ತುರುಕಿ ಅಮಾನವೀಯ ಹಲ್ಲೆ

ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕಗ್ಗೊಲೆ ಮಾಡಿದ ಪಾಪಿ ತಂದೆ!

ಜಾತಿಯ ಕಾರಣಕ್ಕಾಗಿ ದಲಿತ ಮಹಿಳೆಯರ ಮೀನು ವ್ಯಾಪಾರಕ್ಕೆ ಅಡ್ಡಿ | ಅಂಬೇಡ್ಕರ್ ಭಾವ ಚಿತ್ರಕ್ಕೆ ಅವಮಾನ

ಎಸ್ ಸಿ-ಎಸ್ ಟಿಗಳ ಜಾತಿ ನಿಂದನೆ; “ಮಳೆಯಲಿ ಜೊತೆಯಲಿ” ನಟಿಯ ವಿರುದ್ಧ ಎಫ್ ಐಆರ್

ಕಂಪ್ಯೂಟರ್ ಯುಗದಲ್ಲಿಯೂ ಜಾತಿ ಪೀಡೆ: ನೊಂದ ದಲಿತ ಕುಟುಂಬದಿಂದ ಆತ್ಮಹತ್ಯೆಗೆ ಯತ್ನ

ಬ್ರಾಹ್ಮಣರ ಹೆಣ್ಣುಮಕ್ಕಳು ಇತರ ಜಾತಿಯವರನ್ನು ಮದುವೆಯಾಗುವುದನ್ನು ತಡೆಯಬೇಕು | ಪೇಜಾವರ ಶ್ರೀ

ಇದು ಲವ್ ಜಿಹಾದ್ ಅಲ್ಲ, ಜಾತಿ ಭಯೋತ್ಪಾದನೆ | ಪ್ರೀತಿಸಿ ಅಂತರ್ಜಾತಿ ವಿವಾಹವಾದ ಜೋಡಿ, ಆ ಮೇಲೆ ನಡೆದದ್ದೇನು ಗೊತ್ತಾ?

 

ಇತ್ತೀಚಿನ ಸುದ್ದಿ