ಹಲ್ಲು ನುಂಗಿದ ಪರಿಣಾಮ ಮಹಿಳೆ ಸಾವು | ಏನಿದು ವಿಚಿತ್ರ ಘಟನೆ! - Mahanayaka
12:09 AM Wednesday 11 - December 2024

ಹಲ್ಲು ನುಂಗಿದ ಪರಿಣಾಮ ಮಹಿಳೆ ಸಾವು | ಏನಿದು ವಿಚಿತ್ರ ಘಟನೆ!

teeth
15/07/2021

ಚೆನ್ನೈ: ಮಹಿಳೆಯೊಬ್ಬರು ತಮ್ಮ ಕೃತಕ ಹಲ್ಲನ್ನು ನುಂಗಿದ ಪರಿಣಾಮ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದ್ದು, ತನ್ನ 3 ಕೃತಕ ಹಲ್ಲುಗಳ ಪೈಕಿ ಒಂದು ಹಲ್ಲನ್ನು ಅವರು ನುಂಗಿದ್ದಾರೆ ಎಂದು ವರದಿಯಾಗಿದೆ.

 ವಲಸರವಕ್ಕಂನ 43 ವರ್ಷದ ಎಸ್ ರಾಜಲಕ್ಷ್ಮಿ ಅವರು ಮೃತ ಮಹಿಳೆಯಾಗಿದ್ದು, ಜುಲೈ ೪ ರಂದು ನೀರು ಕುಡಿಯುತ್ತಿದ್ದಾಗ ತನ್ನ ಮೂರು ಕೃತಕ ಹಲ್ಲುಗಳಲ್ಲಿ ಒಂದನ್ನು ನುಂಗಿದ್ದಾರೆ. ಬಳಿಕ ತಲೆತಿರುಗುವಿಕೆ ಮತ್ತು ವಾಕರಿಕೆ ಉಂಟಾದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳೆಗೆ ಆತಂಕಾರಿ ಆರೋಗ್ಯ ಪರಿಸ್ಥಿತಿಗಳು ಇಲ್ಲ ಎಂದು ವೈದ್ಯರು ಹೇಳಿದ ಕಾರಣ ಅವರನ್ನು ಮನೆಗೆ ಕಳುಹಿಸಲಾಗಿದೆ. ಆದರೆ ಮರು ದಿನ ರಾಜಲಕ್ಷ್ಮೀ ಅವರು ಮೂರ್ಛೆ ಹೋಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಅವರು ಸಾವನ್ನಪ್ಪಿದ್ದಾರೆ.

ಇನ್ನು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದ್ದು, ಅಸಜ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಹಿಳೆಗೆ 7 ವರ್ಷಗಳ ಹಿಂದೆ ಕೃತಕ ಹಲ್ಲು ಹಾಕಿಸಲಾಗಿತ್ತು. ಹೀಗಾಗಿ ಹಲ್ಲು ಸಡಿಲವಾಗಿ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಇನ್ನಷ್ಟು ಸುದ್ದಿಗಳು:

 

ಕಚೇರಿಯಲ್ಲಿ ಮಹಿಳೆಗೆ ಮರ್ಮಾಂಗ ತೋರಿಸಿ ವಿಕೃತಿ ಮೆರೆದ ಗ್ರೇಡ್ 2 ತಹಶೀಲ್ದಾರ್!

ಆಟವಾಡುತ್ತಿದ್ದ ಬಾಲಕಿ ಏಕಾಏಕಿ ಕುಸಿದು ಸಾವು | ಜೀವ ತೆಗೆಯಿತು ಮಿಕ್ಷರ್

ವರ ಇಷ್ಟವಿಲ್ಲ ಎಂದಿದ್ದಕ್ಕೆ ತಂಗಿಯನ್ನು ಕೊಡಲಿಯಿಂದ ಕೊಚ್ಚಿಕೊಂದ ಅಣ್ಣ!

ಮಿಸ್ಡ್ ಕಾಲ್ ನಿಂದ ಆರಂಭವಾದ ಪ್ರೀತಿ, ಅತ್ಯಾಚಾರದಲ್ಲಿ ಕೊನೆಯಾಯ್ತು!

 

ಇತ್ತೀಚಿನ ಸುದ್ದಿ