ಅಫ್ಘಾನಿಸ್ತಾನದಲ್ಲಿ ಭಾರತದ ಪತ್ರಕರ್ತನ ಬರ್ಬರ ಹತ್ಯೆ!
ಅಫ್ಘಾನಿಸ್ತಾನ: ಅಫ್ಘಾನಿಸ್ತಾನದ ಕಂದಹಾರ್ ನ ಬೋಲ್ಡಕ್ ಜಿಲ್ಲೆಯ ಸ್ಪಿನ್ ನಲ್ಲಿ ನಡೆಯುತ್ತಿರುವ ಘರ್ಷಣೆಯನ್ನು ಚಿತ್ರೀಕರಿಸುತ್ತಿದ್ದ ವೇಳೆ ರಾಯಿಟರ್ಸ್ ಮುಖ್ಯ ಫೋಟೋಗ್ರಾಫರ್ ಡ್ಯಾನಿಷ್ ಸಿದ್ದಿಕಿಯನ್ನ ಹತ್ಯೆಗೈಯಲಾಗಿದೆ ಎಂದು ವರದಿಯಾಗಿದೆ.
ಪುಲ್ಟಿಜೆರ್ ಪ್ರಶಸ್ತಿ ಸ್ವೀಕರಿಸಿದ್ದ ಪತ್ರಕರ್ತ ಸಿದ್ದಿಕಿ ಕಳೆದ ಕೆಲ ದಿನಗಳಿಂದ ಕಂದಹಾರ್ನ ಘರ್ಷಣೆಯನ್ನ ಚಿತ್ರೀಕರಿಸುತ್ತಿದ್ದರು ಎನ್ನಲಾಗಿದೆ. ಸಿದ್ದಿಕಿ ಅವರ ಹತ್ಯೆಯ ಬಗ್ಗೆ ಅಫ್ಘಾನಿಸ್ತಾನದ ಭಾರತದ ರಾಯಭಾರಿ ಫರೀದ್ ಮಾಮುಂಡ್ಜೆ ಟ್ವಿಟರ್ನಲ್ಲಿ ಅಧಿಕೃತ ಮಾಹಿತಿ ನೀಡಿದ್ದಾರೆ.
ಕಳೆದ ರಾತ್ರಿ ಕಂದಹಾರ್ ಜಿಲ್ಲೆಯಲ್ಲಿ ಸ್ನೇಹಿತರ ಡ್ಯಾನಿಷ್ ಸಿದ್ದಿಕಿಯನ್ನ ಹತ್ಯೆ ಮಾಡಿದ ವಿಚಾರ ತಿಳಿದು ದುಃಖಿತನಾಗಿದ್ದೇನೆ. ಭಾರತೀಯ ಪತ್ರಕರ್ತ ಹಾಗೂ ಪುಲ್ಟಿಜೆರ್ ಪ್ರಶಸ್ತಿ ಪುರಸ್ಕೃತನ ಮೇಲೆ ಭಯೋತ್ಪಾದಕರು ದಾಳಿ ಮಾಡುವ ವೇಳೆ ಅವರು ಅಫ್ಘನ್ ಭದ್ರತಾ ಸಿಬ್ಬಂದಿ ಜೊತೆಯಿದ್ದರು ಎಂದು ಟ್ವೀಟಾಯಿಸಿದ್ದಾರೆ.
ಇನ್ನಷ್ಟು ಸುದ್ದಿಗಳು:
ಪ್ರೇಮಿಗೆ ಹಿಗ್ಗಾಮುಗ್ಗಾ ಥಳಿಸಿದರೂ, ಆತನ ಪ್ರೀತಿಗೆ ಕರಗಿ ಮಗಳ ಕೊಟ್ಟು ಮದುವೆ ಮಾಡಿದರು!
ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿರುವವರಿಗೆ ಬಿಗ್ ಶಾಕ್ ನೀಡಿದ ಪೊಲೀಸರು!
ಚರ್ಚ್ ಗೆ ಸೇರಿದ ಜಾಗದಲ್ಲಿ ಹಿಂದೂ ದಂಪತಿಯ ಅಂತ್ಯಕ್ರಿಯೆ | ಸಹೋದರತೆ ಸಾರಿದ ಚರ್ಚ್