ಜಾಸ್ತಿ ಮಕ್ಕಳು ಮಾಡಿಕೊಳ್ಳಲು ತಾಕತ್ ಇದ್ರೆ ಮಾಡಿಕೊಳ್ತಾರೆ | ಜಮೀರ್ ಹೇಳಿದ್ದೇನು? - Mahanayaka
10:59 PM Wednesday 11 - December 2024

ಜಾಸ್ತಿ ಮಕ್ಕಳು ಮಾಡಿಕೊಳ್ಳಲು ತಾಕತ್ ಇದ್ರೆ ಮಾಡಿಕೊಳ್ತಾರೆ | ಜಮೀರ್ ಹೇಳಿದ್ದೇನು?

zameer khan
16/07/2021

ಬೆಂಗಳೂರು: ಜನಸಂಖ್ಯಾ ನಿಯಂತ್ರಣ ಕಾಯ್ದೆ ವಿಚಾರವಾಗಿ ಕಾಂಗ್ರೆಸ್ ಶಾಸಕ ಬಿಜೆಪಿಗೆ ಕುಟುಕಿದ್ದು, “ಮಕ್ಕಳು ಜಾಸ್ತಿ ಮಾಡಿಕೊಳ್ಳಲು ತಾಕತ್ ಇದ್ರೆ, ಮಾಡಿಕೊಳ್ಳುತ್ತಾರೆ ಇವೆಲ್ಲ ಚುನಾವಣೆ ಗಿಮಿಕ್ ಎಂದು ಹೇಳಿದ್ದಾರೆ.

ಜನಸಂಖ್ಯಾ ಕಾಯ್ದೆ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಜಮೀರ್, 20 ವರ್ಷಗಳ ಹಿಂದೆ, ಯಾರ ಬಳಿಯಾದರೂ ನಿನಗೆ ಎಷ್ಟು ಜನ ಅಣ್ಣ-ತಮ್ಮಂದಿರು ಎಂದು ಕೇಳಿದರೆ 8-10 ಎಂದು ಹೇಳುತ್ತಿದ್ದರು. ಕೇವಲ ಮುಸ್ಲಿಮರಿಗೆ ಮಾತ್ರ ಅಷ್ಟು ಮಕ್ಕಳು ಇರುತ್ತಿರಲಿಲ್ಲ, ಈಗ ಪ್ರತಿಯೊಬ್ಬರಿಗೂ ಜನ ಸಂಖ್ಯೆಯ ಬಗ್ಗೆ ಜಾಗೃತಿ ಬಂದಿದೆ. 2-3 ಮಕ್ಕಳು ಸಾಕು ಎಂದೇ ಎಲ್ಲರೂ ನಿರ್ಧರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಇಂತಹ ಕಾಯ್ದೆ ತರುವ ಅಗತ್ಯವೇನಿದೆ ಎಂದು ಅವರು ಪ್ರಶ್ನಿಸಿದರು.

ಮಕ್ಕಳನ್ನು ಸಾಕೋ ತಾಕತ್ ಇದ್ರೆ, ನಾನು ಎಷ್ಟು ಮಕ್ಕಳು ಮಾಡ್ಕೋಳ್ತಿನಿ… ನೀವು ಏನು ಕಾನೂನು ತಂದರೂ ಮಾಡೇ ಮಾಡುತ್ತಾರೆ.  ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ಚುನಾವಣೆ ಬರುತ್ತಿದೆ. ಅದಕ್ಕಾಗಿ  ಈಗ ಗಿಮಿಕ್ ನಡೆಯುತ್ತಿದೆ ಅಷ್ಟೆ ಎಂದು ಜಮೀರ್ ಹೇಳಿದರು.

ಇನ್ನಷ್ಟು ಸುದ್ದಿಗಳು

 

“ನೀನು ಹಿಂದೂ ಅಲ್ಲ, ಹೊರಗೆ ಹೋಗು ಕ್ರೈಸ್ತ ಯುವಕನಿಗೆ ತಾಕೀತು” | ಸಚಿವ ಅಂಗಾರರ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ?

ದುಬೈನಿಂದ ಬಂದಿದ್ದ ಮಹಿಳೆ ಅಪಾರ್ಟ್ ನಲ್ಲಿ ಬರ್ಬರವಾಗಿ ಹತ್ಯೆ | ಬ್ಯಾಂಕ್ ನಿಂದ ಬಂದ ಮೇಲೆ ಪ್ಲಾಟ್ ಗೆ ನುಗ್ಗಿದ್ದು ಯಾರು?

‘ಒಂದು ಮಗು ನೀತಿ’ಯನ್ನು ಕೈಬಿಡಬೇಕು | ಯೋಗಿ ಸರ್ಕಾರಕ್ಕೆ ವಿಶ್ವ ಹಿಂದೂ ಪರಿಷತ್ ಮನವಿ!

ಲೋನ್ ಬೇಕಾದ್ರೆ ಲೈಂಗಿಕ ಆಸೆ ತೀರಿಸ್ಬೇಕು: ವಿಡಿಯೋ ವೈರಲ್ ಬಳಿಕ ಬಯಲಾಯ್ತು ಬ್ಯಾಂಕ್ ಮ್ಯಾನೇಜರ್ ನ ಅಸಲಿ ಮುಖ

 

ಇತ್ತೀಚಿನ ಸುದ್ದಿ