ಬಾಲಕಿಯನ್ನು ರಕ್ಷಿಸಲು ಹೋಗಿ ಬಾವಿಗೆ ಬಿದ್ದ 30 ಮಂದಿ | ನಾಲ್ವರು ಸಾವು, ಹಲವರು ನಾಪತ್ತೆ
ಭೋಪಾಲ್: ಬಾವಿಗೆ ಬಿದ್ದ ಬಾಲಕಿಯನ್ನು ರಕ್ಷಿಸುವುದಕ್ಕೆ ಹೋಗಿ 30ಕ್ಕೂ ಹೆಚ್ಚು ಮಂದಿ ಬಾವಿಗೆ ಹಾರಿದ್ದು ಈ ಪೈಕಿ ನಾಲ್ವರು ಮೃತಪಟ್ಟು 13 ಮಂದಿ ನಾಪತ್ತೆಯಾಗಿರುವ ಘಟನೆ ಮಧ್ಯಪ್ರದೇಶ ವಿಧಿಶಾದ ಗಂಜ್ ಬಸೋದಾದಲ್ಲಿ ನಡೆದಿದೆ.
ಜಿಲ್ಲಾ ಕೇಂದ್ರದಿಂದ 50 ಕಿಲೋ ಮೀಟರ್ ದೂರದಲ್ಲಿ ಈ ಗಂಜ್ ಬಸೋದಾ ಪ್ರದೇಶದ 50 ಅಡಿ ಆಳದ ಬಾವಿಯಲ್ಲಿ 20 ಅಡಿಯಷ್ಟು ನೀರು ತುಂಬಿತ್ತು ಎಂದು ಸ್ಥಳೀಯರು ಹೇಳುತ್ತಿದ್ದು, ಬಾವಿಗೆ ಬಿದ್ದವರ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಬಾಲಕಿಯೊಬ್ಬಳು ಬಾವಿಗೆ ಬಿದ್ದಿದ್ದಳು. ಆ ಬಾಲಕಿ ರಕ್ಷಿಸುವುದಕ್ಕಾಗಿ ಕೆಲವರು ಬಾವಿಗೆ ಇಳಿದರೆ ಇತರರು ಸಹಾಯ ಮಾಡುವುದಕ್ಕಾಗಿ ಸುತ್ತಲಿನ ಪ್ಯಾರಪೆಟ್ ಗೋಡೆ ಮೇಲೆ ನಿಂತಿದ್ದರು. ಈ ಗೋಡೆಯು ದಿಢೀರನೇ ಕುಸಿದಿದ್ದು, ಅದರ ಮೇಲೆ ನಿಂತವರೆಲ್ಲ ಬಾವಿಗೆ ಬಿದ್ದರು
ಬಾವಿಗೆ ಬಿದ್ದ 30ಕ್ಕೂ ಹೆಚ್ಚು ಜನರ ಪೈಕಿ ನಾಲ್ವರು ಮೃತಪಟ್ಟಿದ್ದು, 19 ಜನರನ್ನು ರಕ್ಷಿಸಲಾಗಿದೆ. ಇನ್ನೂ 13 ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಸಂತಾಪ ಸೂಚಿಸಿದ್ದಾರೆ. ಬಾವಿಗೆ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಇದರ ಜೊತೆ ಗಾಯಗೊಂಡವರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ಹಾಗೂ 50,000 ರೂಪಾಯಿ ಪರಿಹಾರ ನೀಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.
ಇನ್ನಷ್ಟು ಸುದ್ದಿಗಳು:
ಯುವಕನ ದವಡೆಯಲ್ಲಿತ್ತು ಬರೋಬ್ಬರಿ 82 ಹಲ್ಲುಗಳು!
ಫ್ಲ್ಯಾಟ್ ಗೆ ನುಗ್ಗಿ ಯುವತಿಯನ್ನು ಕಟ್ಟಿ ಹಾಕಿ ಸಾಮೂಹಿಕ ಅತ್ಯಾಚಾರ: 15 ಲಕ್ಷ ರೂಪಾಯಿ ಕಳವು]
ಸರಗಳ್ಳರನ್ನು ಬೆನ್ನಟ್ಟಿ ಹೋದ ಪೊಲೀಸರಿಗೆ ಸಿಕ್ಕಿದ್ದು ಎಟಿಎಂ ಕಳ್ಳರು!
ಹೆರಿಗೆಯಾಗಿದ್ದ ಅಕ್ಕನ ಆರೈಕೆಗೆ ಹೋದ ತಂಗಿಯ ಮೇಲೆ ಭಾವನಿಂದಲೇ ಅತ್ಯಾಚಾರ!