ನೆಲ್ಯಾಡಿ:  ಮೂರೂವರೆ ಗಂಟೆಗಳ ಅಂತರದಲ್ಲಿ ಪತಿ-ಪತ್ನಿ ಇಬ್ಬರೂ ಕೊವಿಡ್ ಗೆ ಬಲಿ - Mahanayaka
4:45 PM Wednesday 11 - December 2024

ನೆಲ್ಯಾಡಿ:  ಮೂರೂವರೆ ಗಂಟೆಗಳ ಅಂತರದಲ್ಲಿ ಪತಿ-ಪತ್ನಿ ಇಬ್ಬರೂ ಕೊವಿಡ್ ಗೆ ಬಲಿ

nelyadi covid death
16/07/2021

ನೆಲ್ಯಾಡಿ: ಕೊರೊನಾ ಸೋಂಕು ತಗಲಿದ ಕಾರಣ ಕಳೆದ 12 ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಂಪತಿ ಮೂರೂವರೆ ಗಂಟೆಗಳ ಅಂತರದಲ್ಲಿ  ಒಂದೇ ದಿನ ಮೃತಪಟ್ಟಿದ್ದಾರೆ.

ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸೈಂಟ್ ಮೇರಿಸ್  ಚರ್ಚ್ ನ ಧರ್ಮಗುರು ಸೆಬಾಸ್ಟಿಯನ್ ಪುನ್ನತ್ತಾನತ್ತ್ ಅವರ ತಾಯಿ ಮೇರಿ ಪುನ್ನತ್ತಾನತ್ ಹಾಗೂ ತಂದೆ ವರ್ಗೀಸ್ ಪುನ್ನತ್ತಾನತ್ತ್ ಮೃತಪಟ್ಟ ದಂಪತಿ.

ಜುಲೈ 4ರಂದು ಅನಾರೋಗ್ಯ ಹಿನ್ನೆಲೆಯಲ್ಲಿ ದಂಪತಿ ಆಸ್ಪತ್ರೆಗೆ ದಾಖಲಾಗಿದ್ದರು. ಅನ್ಯೋನ್ಯವಾಗಿ ಜೀವನ ನಡೆಸಿದ್ದ ಈ ದಂಪತಿ ಇದೀಗ ಸಾವಿನಲ್ಲಿಯೂ ಒಂದಾಗಿದ್ದಾರೆ.  ಮೃತರು ಓರ್ವರು ಧರ್ಮಗುರು ಸಹಿತ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಇವರ ಅಂತ್ಯಸಂಸ್ಕಾರ ಇಂದು ನೆಲ್ಯಾಡಿಯ ಸೈಂಟ್  ಅಲ್ಫೋನ್ಸಾ ಚರ್ಚ್ ನ ದಫನ ಭೂಮಿಯಲ್ಲಿ  ಇಂದು ಬೆಳಗ್ಗೆ ನೆರವೇರಿಸಲಾಗಿದೆ.

ಇತ್ತೀಚಿನ ಸುದ್ದಿ