ಹಾಸನದಿಂದ ಸ್ಪರ್ಧಿಸಲಿದ್ದಾರಾ ಮಲ್ಲಿಕಾರ್ಜುನ ಖರ್ಗೆ? | ದೊಡ್ಡ ಗೌಡ್ರ ಕೋಟೆ ಛಿದ್ರವಾಗುತ್ತಾ?
ಹಾಸನ: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಸನದಿಂದ ಸ್ಪರ್ಧಿಸಲಿದ್ದಾರೆಯೇ ಎನ್ನುವ ಕುತೂಹಲಕ್ಕೆ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಅವರು ಅಡಿಪಾಯ ಹಾಕಿದ್ದಾರೆ.
ಹಾಸನದ ಚನ್ನರಾಯಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಆಹಾರ ವಿತರಣಾ ಸಮಾರಂಭದಲ್ಲಿ ಮಾತನಾಡಿರುವ ಪುಟ್ಟೇಗೌಡ, ಹಾಸನ ಜಿಲ್ಲೆ ದೇವೇಗೌಡರ ಹಿಡಿತದಿಂದು ಮುಕ್ತವಾಗಿಲ್ಲ. ಜಿಲ್ಲೆಯ ಗಡಿಭಾಗದಿಂದ ಕೃಷ್ಣಾರ್ಜುನರಂತಿರುವ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಜೊತೆಯಲ್ಲಿ ಧರ್ಮರಾಯನಂತಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹಾಸನಕ್ಕೆ ಕರೆತರುವ ಮೂಲಕ ಹಾಸನದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.
ವಿಶ್ವದಲ್ಲಿ ಸೂರ್ಯ-ಚಂದ್ರ ಇರೋದು ಎಷ್ಟು ಸತ್ಯವೋ ಮುಂದಿನ ಬಾರಿ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ 7 ಸ್ಥಾನ ಗೆಲ್ಲುವುದು ಅಷ್ಟೇ ಸತ್ಯ. ಬದಲಾವಣೆ ಖಂಡಿತಾ ಆಗುತ್ತದೆ ಎಂದು ಸಿ.ಎಸ್.ಪುಟ್ಟೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ದೇಶಕ್ಕೆ ಸ್ವಾತಂತ್ರ್ಯ ದೊರಕಿದರೂ ಹಾಸನ ಜಿಲ್ಲೆಗೆ ದೇವೇಗೌಡರ ಕುಟುಂಬದಿಂದ ಸ್ವಾತಂತ್ರ್ಯ ಸಿಕ್ಕಿಲ್ಲ. ಮುಂದಿನ ಚುನಾವಣೆಯಲ್ಲಿ ಅವರ ಕುಟುಂಬ ರಾಜಕಾರಣ ಅಂತ್ಯವಾಗುತ್ತದೆ. 7 ಕ್ಷೇತ್ರಗಳು ಕಾಂಗ್ರೆಸ್ ಪಾಲಾಗುತ್ತದೆ ಎಂದು ಅವರು ಹೇಳಿದರು.
ಇನ್ನಷ್ಟು ಸುದ್ದಿಗಳು…
ಸೇತುವೆ ಇಲ್ಲ: ತೋಡಿನಲ್ಲಿ ವೃದ್ಧೆಯನ್ನು ಸ್ಟ್ರೆಚರ್ ಮೂಲಕ ಸಾಗಿಸುವ ದುಸ್ಥಿತಿ
ಮುಖಕ್ಕೆ ಹಾಕುವ ಮಾಸ್ಕ್ ನ್ನು ಬಿಜೆಪಿ ಸಚಿವ ಹಾಕಿದ್ದೆಲ್ಲಿಗೆ ಗೊತ್ತಾ? | ಫೋಟೋ ವೈರಲ್
ಉದ್ಯೋಗ ಮಾತ್ರವಲ್ಲ, ದಂಪತಿಯ ಪ್ರಾಣವನ್ನೂ ಕಸಿದುಕೊಂಡಿತು ಲಾಕ್ ಡೌನ್ | ಮಕ್ಕಳು ಅನಾಥ
ಸ್ನಾನ ಮಾಡಲು ಬಾತ್ ರೂಮ್ ಗೆ ಹೋದಾತ ಗಂಟೆಯಾದರೂ ವಾಪಸ್ ಆಗಲಿಲ್ಲ | ಬಾಗಿಲು ತೆರೆದಾಗ ಕಾದಿತ್ತು ಶಾಕ್!