“ಜಾನುವಾರುಗಳಿಗೆ ಆಂಬುಲೆನ್ಸ್, ಜಿಲ್ಲೆಗೊಂದು ಗೋ ಶಾಲೆ”
ಶಿವಮೊಗ್ಗ: ಜಾನುವಾರುಗಳ ಆರೋಗ್ಯ ಸಂರಕ್ಷಣೆಗಾಗಿ 41 ಆಂಬುಲೆನ್ಸ್ ನೀಡಲಾಗಿದೆ. ಜಾನುವಾರುಗಳಿಗೇ ಪ್ರತ್ಯೇಕ ಆಂಬುಲೆನ್ಸ್ ಮೀಸಲಿಡುತ್ತಿರುವುದು ದೇಶದಲ್ಲಿಯೇ ಮೊದಲು ಎಂದು ಪಶುಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಶುಪಾಲನಾ ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಬೆಂಗಳೂರು ಜಿಲ್ಲೆಗೆ 10, ಇತರೆ ಜಿಲ್ಲೆಗಳಿಗೆ ತಲಾ ಒಂದು ಆಂಬುಲೆನ್ಸ್ ನೀಡಲಾಗಿದೆ. ಜತೆಗೆ ಸರ್ಕಾರ ದಿಂದಲೇ ಜಿಲ್ಲೆಗೊಂದು ಗೋ ಶಾಲೆ ನಿರ್ಮಿಸಿ, ನೀರು, ನೆರಳು ಹಾಗೂ ಮೇವು ಒದಗಿಸಲಾಗುವುದು ಎಂದರು.
ರಾಜ್ಯದ ಗೋಮಾಳಗಳ ಸಮೀಕ್ಷೆ ನಡೆಸಲಾಗುತ್ತಿದೆ. ಒತ್ತುವರಿಯಾದ ಗೋಮಾಳ ಜಾಗ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಅನ್ಯ ಇಲಾಖೆಗಳಲ್ಲಿ ಎರವಲು ಸೇವೆ ಸಲ್ಲಿಸುತ್ತಿರುವ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾತೃ ಇಲಾಖೆಗೆ ಮರಳುವಂತೆ ಆದೇಶ ಹೊರಡಿಸಲಾಗಿದೆ. ಸಕಾಲದಲ್ಲಿ ಹಿಂದಿರುಗದ ಅಧಿಕಾರಿ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಇನ್ನಷ್ಟು ಸುದ್ದಿಗಳು:
ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿರುವವರಿಗೆ ಬಿಗ್ ಶಾಕ್ ನೀಡಿದ ಪೊಲೀಸರು!
ಹಲ್ಲು ನುಂಗಿದ ಪರಿಣಾಮ ಮಹಿಳೆ ಸಾವು | ಏನಿದು ವಿಚಿತ್ರ ಘಟನೆ!
ರಾಜಕೀಯಕ್ಕೆ ಕಾಲಿಡುತ್ತಾರಾ ರವಿ ಡಿ.ಚೆನ್ನಣ್ಣನವರ್? | ಏನಿದು ಹೊಸ ಚರ್ಚೆ?
ಹಾಸನದಿಂದ ಸ್ಪರ್ಧಿಸಲಿದ್ದಾರಾ ಮಲ್ಲಿಕಾರ್ಜುನ ಖರ್ಗೆ? | ದೊಡ್ಡ ಗೌಡ್ರ ಕೋಟೆ ಛಿದ್ರವಾಗುತ್ತಾ?
ಮೂರು ತಲೆಯ ಮಗುವಿಗೆ ಜನ್ಮ ನೀಡಿದ ತಾಯಿ!
ಪ್ರೇಮಿಗೆ ಹಿಗ್ಗಾಮುಗ್ಗಾ ಥಳಿಸಿದರೂ, ಆತನ ಪ್ರೀತಿಗೆ ಕರಗಿ ಮಗಳ ಕೊಟ್ಟು ಮದುವೆ ಮಾಡಿದರು!