ಆಸ್ತಿಯನ್ನು ಭಾಗ ಮಾಡಿಕೊಡಲಿಲ್ಲ ಎಂದು ತಾಯಿಯನ್ನು ಬೀದಿಗೆ ತಳ್ಳಿದ ಮಕ್ಕಳು
ಹಾವೇರಿ: ಆಸ್ತಿಯನ್ನು ಭಾಗ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ತಾಯಿಯನ್ನು ಮಕ್ಕಳು ಮನೆಯಿಂದ ಹೊರ ಹಾಕಿ ಪಾಳು ಬಿದ್ದ ಮನೆಯೊಂದರಲ್ಲಿ ವಾಸಿಸುವಂತೆ ಮಾಡಿರುವ ಅಮಾನವೀಯ ಘಟನೆಯೊಂದು ವರದಿಯಾಗಿದೆ.
ಈರಮ್ಮ ಎಂಬ ವೃದ್ಧೆ ತನ್ನ ಮಕ್ಕಳಿಂದಾಗಿ ಬೀದಿಗೆ ಬಿದ್ದವರಾಗಿದ್ದು, ಕೋಟಿ ಕೋಟಿ ಆಸ್ತಿಯ ಒಡತಿ ಈರಮ್ಮ, ಮಕ್ಕಳ ಜೊತೆಗೆ ಆರಾಮವಾಗಿ ಜೀವಿಸುತ್ತಿರಬೇಕಾದ ಸಮಯದಲ್ಲಿ ಅವರು ಪಾಳು ಬಿದ್ದ ಮನೆಯಲ್ಲಿ ವಾಸಿಸುವಂತಾಗಿದೆ.
ಈರಮ್ಮ ಒಂದು ಹೊತ್ತಿನ ಅನ್ನ-ನೀರಿಗೂ ಪರದಾಡುವ ಸ್ಥಿತಿಯಲ್ಲಿದ್ದಾರೆ ಎಂದು ಹೇಳಲಾಗಿದೆ. ಯಾರೋ ಕೊಟ್ಟ ಬಟ್ಟೆ, ಊಟದಿಂದ ಅವರು ಬದುಕು ಸಾಗಿಸುತ್ತಿರುವ ದೃಶ್ಯ ಹೃದಯ ವಿದ್ರಾವಕವಾಗಿದೆ.
ಇನ್ನೂ ವೃದ್ಧೆಯ ನರಕಯಾತನೆ ನೋಡಲಾಗದೇ ಪಕ್ಕದ ಪ್ಲಾಸ್ಟಿಕ್ ಅಂಗಡಿ ಮಾಲಿಕ ವೃದ್ಧೆಯನ್ನು ಉಪಚಾರ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ. ಮಕ್ಕಳ ಈ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ಪ್ರಕರಣವನ್ನು ಪತ್ತೆ ಹಚ್ಚಿ, ಆರೋಪಿಗಳನ್ನು ಬಂಧಿಸಿ ಕ್ರಮಕೈಗೊಳ್ಳಬೇಕು ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇನ್ನಷ್ಟು ಸುದ್ದಿಗಳು…
ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿರುವವರಿಗೆ ಬಿಗ್ ಶಾಕ್ ನೀಡಿದ ಪೊಲೀಸರು!
ಆಸ್ಪತ್ರೆಯ ಕಿಟಕಿಯ ಗ್ರಿಲ್ ಮುರಿದು ಬುದ್ಧಿಮಾಂದ್ಯ ಮಹಿಳೆಯ ಮೇಲೆ ಅತ್ಯಾಚಾರ!
“ಅಪಘಾತ ಹೇಗಾಯ್ತು?” ಎಂದು ಕೇಳಿದಕ್ಕೆ “ಟಿಶ್ಕ್ಯಾವ್” ಅಂತ ಆಯ್ತು ಎಂದ ಜಗ್ಗೇಶ್ ಪುತ್ರ!