ಭಾರೀ ಮಳೆಗೆ ಕುಸಿದ ಗೋಡೆ: 15 ಮಂದಿ ದಾರುಣ ಸಾವು, 17 ಮಂದಿಗೆ ಗಂಭೀರ ಗಾಯ
ಮುಂಬೈ: ಭಾರೀ ಮಳೆಯ ಅಬ್ಬರಕ್ಕೆ ಗುಡಿಸಲ ಮೇಲೆ ಗೋಡೆ ಕುಸಿದು ಬಿದ್ದು 12 ಮಂದಿ ಮೃತಪಟ್ಟಿರುವ ದಾರುಣ ಘಟನೆ ಮುಂಬೈನ ಚೆಂಬೂರ್ ನಲ್ಲಿ ನಡೆದಿದ್ದು, 17 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮುಂಬೈನ ಮಲಾಡ್ ವೆಸ್ಟ್ ನ ನ್ಯೂ ಕಲೆಕ್ಟರ್ ಕಾಂಪೌಂಡ್ ನಲ್ಲಿ ಬುಧವಾರ ತಡರಾತ್ರಿ ವಸತಿ ಕಟ್ಟಡ ಕುಸಿದು ಕನಿಷ್ಠ 12 ಜನರು ಮೃತಪಟ್ಟಿದ್ದಾರೆ ಎಂದು ಬೃಹನ್ಮುಂಬೈ , ಮುನ್ಸಿಪಲ್ ಕಾರ್ಪೋರೇಷನ್ ಈ ಬಗ್ಗೆ ಮಾಹಿತಿ ನೀಡಿದೆ.
ಅವಶೇಷಗಳಡಿಯಲ್ಲಿ ಇನ್ನೂ ಹಲವಾರು ಜನರು ಸಿಲುಕಿದ್ದು, ಅವರ ರಕ್ಷಣಾಕಾರ್ಯ ಮುಂದುವರಿಸಲಾಗಿದೆ. ಗಾಯಾಳುಗಳನ್ನು ಇಲ್ಲಿನ ಬಿಡಿಬಿಎ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಮುಂಜಾನೆ ನಡೆದ ಈ ಅವಘಡ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಇನ್ನೂ ಮುಂಬೈನ ವಿಖ್ರೋಲಿಯಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ವಸತಿ ಕಟ್ಟಡ ಕುಸಿದು ಬಿದ್ದು, ಮೂವರು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಕಾರ್ಯಾಚರಣೆಯ ಮೂಲಕ ಹೊರ ತೆಗೆಯಲಾಗಿದೆ.
ಇನ್ನಷ್ಟು ಸುದ್ದಿಗಳು:
ದೇಶ ಹಾಳು ಮಾಡಿದವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ | ನಾಲಿಗೆ ಹರಿಯಬಿಟ್ಟ ನಾರಾಯಣಾಚಾರ್ಯ!
ಖ್ಯಾತ ಪೋರ್ನ್ ಸ್ಟಾರ್ ಳ ಮೃತದೇಹ ಕಾರಿನಲ್ಲಿ ಪತ್ತೆ | ಆತ್ಮಹತ್ಯೆಯೋ? ಕೊಲೆಯೋ?
“ಎಣ್ಣೆ ಹೊಡೆದ ಮತ್ತಿನಲ್ಲಿ ದರ್ಶನ್ ಹೊಡೆದ್ಬಿಟ್ಟಿದ್ದಾರೆ” | ಮತ್ತೆ ಕಿಡಿ ಹತ್ತಿಸಿತು ಪ್ರತ್ಯಕ್ಷದರ್ಶಿಯ ಹೇಳಿಕೆ
ಇನ್ ಸ್ಟಾಗ್ರಾಮ್ ಪರಿಚಯವಾದಾತನಿಂದ ವಿವಾಹಿತ ಮಹಿಳೆಯ ಅತ್ಯಾಚಾರ!
ಬೆಚ್ಚಿಬೀಳಿಸಿದ ಘಟನೆ | ಕುಟುಂಬಸ್ಥರ ಎದುರೇ 16ರ ಬಾಲಕಿಯ ಮೇಲೆ 8 ಮಂದಿಯಿಂದ ಸಾಮೂಹಿಕ ಅತ್ಯಾಚಾರ