ಸಾಮಾನ್ಯ ಸಭೆಯ ವೇಳೆ ಗ್ರಾ.ಪಂ. ಸದಸ್ಯೆಯ ಕೈಗೆ ಕಚ್ಚಿದ ಜವಾನ!
ಮಾಗಡಿ: ತಾಲ್ಲೂಕಿನ ಬೆಳಗುಂಬ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಜವಾನ ಮತ್ತವರ ಕುಟುಂಬದವರು ಗ್ರಾ.ಪಂ. ಸದಸ್ಯೆ ಯಶೋದಮ್ಮ ಬೈರಪ್ಪ ಅವರ ಬಲಗೈ ಕಚ್ಚಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಗ್ರಾ.ಪಂ. ಜವಾನರಾಗಿ ಕಾರ್ಯ ನಿರ್ವಹಿಸುತ್ತಿದ್ದ ನರಸಿಂಹಮೂರ್ತಿ ಯವರನ್ನು ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಅಮಾನತು ಮಾಡುವಂತೆ ಕಳೆದ ಜೂನ್ 11ರಂದು ನಡೆದ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಈ ಸಂಬಂಧ ನೌಕರನಿಗೂ ನೋಟಿಸ್ ನೀಡಲಾಗಿತ್ತು.
ಸಭೆ ನಡೆಯುತ್ತಿದ್ದ ವೇಳೆ ಅಮಾನತುಗೊಂಡಿದ್ದ ಜವಾನ ಮತ್ತು ಆತನ ಅಕ್ಕ ಗೌರಮ್ಮ, ತಮ್ಮ ಗೋಪಿ ಇತರರು ಸಭೆಗೆ ನುಗ್ಗಿ ಬಂದರು. ಜಗಳ ತೆಗೆದು ಸಭೆಗೆ ಅಡ್ಡಿಪಡಿಸಿ, ನನ್ನ ಮೇಲೆ ಹಲ್ಲೆ ನಡೆಸಿದರು. ಗೌರಮ್ಮ ಎಂಬಾಕೆ ನನ್ನ ಬಲಕೈಗೆ ಕಚ್ಚಿ ಗಾಯಗೊಳಿಸಿದರು. ಬಿಡಿಸಲು ಬಂದ ನನ್ನ ಪತಿ ಭೈರಪ್ಪ ಅವರ ಮೇಲೂ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅಧ್ಯಕ್ಷೆ ಇಂದ್ರಮ್ಮ ಶಿವಗಂಗಯ್ಯ, ಸದಸ್ಯರಾದ ಗೋಮತಿ ಹಾಗೂ ನನ್ನನ್ನು ಕಚೇರಿಯ ಒಳಗೆ ಕೂಡಿಹಾಕಿ ಬೀಗ ಹಾಕಿದರು. ನಂತರ ಪೊಲೀಸರು ಬಂದು ನಮ್ಮನ್ನು ಬಿಡಿಸಿದರು ಎಂದು ಯಶೋಧಮ್ಮ ಭೈರಪ್ಪ ಆರೋಪಿಸಿದ್ದಾರೆ.
ಇನ್ನೂ ಘಟನೆ ಸಂಬಂಧ ಪ್ರತ್ಯಾರೋಪ ಮಾಡಿರುವ ಜವಾನ ನರಸಿಂಹಮೂರ್ತಿ, ನನ್ನನ್ನು ಅಮಾನತು ಮಾಡಿರುವ ವಿಷಯ ನನಗೆ ಗೊತ್ತಿಲ್ಲ. ಈ ಸಂಬಂಧ ನನಗೆ ನೋಟಿಸ್ ಸಹ ನೀಡಿಲ್ಲ. ಇದನ್ನು ಪ್ರಶ್ನಿಸಲು ಸಭೆಗೆ ಹೋಗಿದ್ದ ವೇಳೆ ಸದಸ್ಯೆ ಯಶೋಧಮ್ಮ ಅವರ ಪತಿ ಭೈರಪ್ಪ ನನ್ನ ಮುಖಕ್ಕೆ ಮುಷ್ಟಿಯಿಂದ ಗುದ್ದಿ ಗಾಯ ಗೊಳಿಸಿದರು. ನಮ್ಮ ಅಕ್ಕನ ಮೇಲೂ ಹಲ್ಲೆ ನಡೆಸಿದರು’ ಎಂದು ದೂರು ನೀಡಿದ್ದಾರೆ.
ಇನ್ನಷ್ಟು ಸುದ್ದಿಗಳು:
ಖ್ಯಾತ ಪೋರ್ನ್ ಸ್ಟಾರ್ ಳ ಮೃತದೇಹ ಕಾರಿನಲ್ಲಿ ಪತ್ತೆ | ಆತ್ಮಹತ್ಯೆಯೋ? ಕೊಲೆಯೋ?
ಕಚೇರಿಯಲ್ಲಿ ಮಹಿಳೆಗೆ ಮರ್ಮಾಂಗ ತೋರಿಸಿ ವಿಕೃತಿ ಮೆರೆದ ಗ್ರೇಡ್ 2 ತಹಶೀಲ್ದಾರ್!
“ಎಣ್ಣೆ ಹೊಡೆದ ಮತ್ತಿನಲ್ಲಿ ದರ್ಶನ್ ಹೊಡೆದ್ಬಿಟ್ಟಿದ್ದಾರೆ” | ಮತ್ತೆ ಕಿಡಿ ಹತ್ತಿಸಿತು ಪ್ರತ್ಯಕ್ಷದರ್ಶಿಯ ಹೇಳಿಕೆ