ಸೆಲ್ಫಿ ತೆಗೆಯುವ ವೇಳೆ ಭಾರೀ ಆಳದ ಜಲಪಾತಕ್ಕೆ ಬಿದ್ದ ಇನ್ಸ್ ಸ್ಟಾ ಸೆಲೆಬ್ರೆಟಿ - Mahanayaka
11:05 PM Wednesday 11 - December 2024

ಸೆಲ್ಫಿ ತೆಗೆಯುವ ವೇಳೆ ಭಾರೀ ಆಳದ ಜಲಪಾತಕ್ಕೆ ಬಿದ್ದ ಇನ್ಸ್ ಸ್ಟಾ ಸೆಲೆಬ್ರೆಟಿ

sophia cheung
18/07/2021

ಸೆಲ್ಫಿಯನ್ನು ಹುಚ್ಚು ಎನ್ನಲಾಗದು. ಯುವ ಜನತೆಯ ಒಂದು ಕ್ರೇಜ್ ಅದು. ಆದರೆ, ಅಪಾಯವನ್ನು ಮೈಮೇಲೆ ಎಳೆದುಕೊಂಡು ಸೆಲ್ಫಿ ತೆಗೆದುಕೊಳ್ಳುವುದನ್ನು ಹುಚ್ಚು ಎನ್ನದಿರಲು ಸಾಧ್ಯವಿಲ್ಲ. ಸೆಲ್ಫಿ ತೆಗೆದುಕೊಳ್ಳುವ ವೇಳೆ ಬಹಳಷ್ಟು ಜನರು  ವಿಶ್ವದಾದ್ಯಂತ ಸಾವನ್ನಪ್ಪಿದ್ದಾರೆ. ಆ ಸಾಲಿಗೆ ಮತ್ತೊಬ್ಬಳು ಇನ್ಸ್ ಸ್ಟಾ ಸೆಲೆಬ್ರೆಟಿ ಸೇರಿದ್ದಾಳೆ.

ಹಾಂಗ್ ಕಾಂಗ್ ನ ಇನ್ಸ್ ಸ್ಟಾ ಸೆಲೆಬ್ರೆಟಿ ಸೋಫಿಯಾ ಚೆವುಂಗ್  ಜಲಪಾತದ ತುದಿಯಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಕಾಲು ಜಾರಿ ಕೆಳಗೆ ಬಿದ್ದು ದಾರುಣವಾಗಿ ಅಂತ್ಯಕಂಡಿದ್ದಾಳೆ. ಈ ಸಾವು ಸೆಲ್ಫಿ ಪ್ರಿಯರನ್ನು ಬೆಚ್ಚಿಬೀಳಿಸಿದೆ.

ಹಪಾಲ್ ಲೈ ಜಲಪಾತದ ತುತ್ತ ತುದಿಗೆ ಹೋದ ಸೋಫಿಯಾ ಅಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಆಯ ತಪ್ಪಿದ ಅವರು ಜಲಪಾತಕ್ಕೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾರೆ. ಉತ್ತಮ ಭವಿಷ್ಯವಿದ್ದ ನಟಿಯಾಗಿ ಸೋಫಿಯಾ ಮಿಂಚುತ್ತಿದ್ದರು. ಆದರೆ, ತಮ್ಮ 32ನೆ ವಯಸ್ಸಿನಲ್ಲಿ ಇದೀಗ ಮರಣ ಹೊಂದಿದ್ದಾರೆ.

ಇನ್ನಷ್ಟು ಸುದ್ದಿಗಳು:

ಖ್ಯಾತ ಪೋರ್ನ್ ಸ್ಟಾರ್ ಳ ಮೃತದೇಹ ಕಾರಿನಲ್ಲಿ ಪತ್ತೆ | ಆತ್ಮಹತ್ಯೆಯೋ?  ಕೊಲೆಯೋ?

ಆಸ್ತಿಯನ್ನು ಭಾಗ ಮಾಡಿಕೊಡಲಿಲ್ಲ ಎಂದು ತಾಯಿಯನ್ನು ಬೀದಿಗೆ ತಳ್ಳಿದ ಮಕ್ಕಳು

ಬಾಲಕಿಯನ್ನು ರಕ್ಷಿಸಲು ಹೋಗಿ ಬಾವಿಗೆ ಬಿದ್ದ 30 ಮಂದಿ | ನಾಲ್ವರು ಸಾವು, ಹಲವರು ನಾಪತ್ತೆ

ಜಾಸ್ತಿ ಮಕ್ಕಳು ಮಾಡಿಕೊಳ್ಳಲು ತಾಕತ್ ಇದ್ರೆ ಮಾಡಿಕೊಳ್ತಾರೆ | ಜಮೀರ್ ಹೇಳಿದ್ದೇನು?

ಬುದ್ಧಿವಾದ ಹೇಳಿದ್ದಕ್ಕೆ ತಮ್ಮನನ್ನು ಹತ್ಯೆ ಮಾಡಿ, ಬೆಡ್ ಶೀಟ್ ನಲ್ಲಿ ಮುಚ್ಚಿ ಪರಾರಿಯಾದ ಅಣ್ಣ!

ಇತ್ತೀಚಿನ ಸುದ್ದಿ