ಮಹಿಳೆಗೆ ಥಳಿಸಿ, ಮೈಮೇಲೆ ಕುಳಿತು ಕಿರುಕುಳ ನೀಡಿದ ಸಬ್ ಇನ್ಸ್ ಪೆಕ್ಟರ್! - Mahanayaka
11:13 PM Wednesday 11 - December 2024

ಮಹಿಳೆಗೆ ಥಳಿಸಿ, ಮೈಮೇಲೆ ಕುಳಿತು ಕಿರುಕುಳ ನೀಡಿದ ಸಬ್ ಇನ್ಸ್ ಪೆಕ್ಟರ್!

uttar pradesh crime news
18/07/2021

ಕಾನ್ಪುರ: ಮಹಿಳೆಯ ದೇಹದ ಮೇಲೆ ಹತ್ತಿ ಪೊಲೀಸ್ ಅಧಿಕಾರಿಯೋರ್ವ ಕಿರುಕುಳ ನೀಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು, ಮಹಿಳೆಯ ದೇಹದ ಮೇಲೆ ಕುಳಿತು ಪೊಲೀಸ್ ಅಧಿಕಾರಿ ಕಿರುಕುಳ ನೀಡಿದ ವಿಡಿಯೋ ವೈರಲ್ ಆಗಿದೆ.

ಸಬ್ ಇನ್ಸ್ ಪೆಕ್ಟರ್ ಮಹೇಂದ್ರ ಪಟೇಲ್ ಎಂಬಾತ ಮಹಿಳೆಗೆ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಗೆ ಲಾಠಿಯಿಂದ ಥಳಿಸಿ ಆಕೆಯನ್ನು ನೆಲಕ್ಕೆ ಕೆಡವಿ ಆಕೆಯ ದೇಹದ ಮೇಲೆ ಕುಳಿತುಕೊಂಡಿರುವುದು ಕಂಡು ಬಂದಿದೆ.

ಮಹೇಂದ್ರ ಪಟೇಲ್ ಮಹಿಳೆಗೆ ಕಿರುಕುಳ ನೀಡುತ್ತಿದ್ದ ವೇಳೆ ಕೆಲವರು ಆತನನ್ನು ತಡೆಯುತ್ತಿರುವುದು ಕಂಡು ವಿಡಿಯೋದಲ್ಲಿ ಕಂಡು ಬಂದಿದೆ ಎಂದು ಹೇಳಲಾಗಿದೆ. ವಿಡಿಯೋ ವೈರಲ್ ಆದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

ಇನ್ನೂ ಆರೋಪಿಯೋರ್ವನನ್ನು ಹುಡುಕುತ್ತಿದ್ದ ವೇಳೆ ಮಹೇಂದ್ರ ಪಟೇಲ್ ಸ್ಥಳೀಯ ಮಹಿಳೆಯೊಂದಿಗೆ ವಾಗ್ವಾದ ನಡೆಸಿದ್ದು, ಬಳಿಕ ಆಕೆಗೆ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಆದರೆ, ಈ ಆರೋಪವನ್ನು ಮಹೇಂದ್ರ ಪಟೇಲ್ ನಿರಾಕರಿಸಿದ್ದಾನೆ.

ಇನ್ನಷ್ಟು ಸುದ್ದಿಗಳು…

ಸ್ನಾನ ಮಾಡುತ್ತಿದ್ದಾಗ ಮೊಬೈಲ್ ನಲ್ಲಿ ಚಿತ್ರೀಕರಣ: ಯುವತಿ ಕಿರುಚಿದಾಗ ಆರೋಪಿ ಪರಾರಿ

ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿರುವವರಿಗೆ ಬಿಗ್ ಶಾಕ್ ನೀಡಿದ ಪೊಲೀಸರು!

ಖ್ಯಾತ ಪೋರ್ನ್ ಸ್ಟಾರ್ ಳ ಮೃತದೇಹ ಕಾರಿನಲ್ಲಿ ಪತ್ತೆ | ಆತ್ಮಹತ್ಯೆಯೋ?  ಕೊಲೆಯೋ?

ಅಯೋಧ್ಯೆಯಲ್ಲಿ ಬ್ರಾಹ್ಮಣರ ಸಮ್ಮೇಳನ ಆಯೋಜಿಸಿದ ಬಿಎಸ್ ಪಿ!

ಕಲ್ಯಾಣ ಮಂಟಪದಲ್ಲಿಯೇ ಗೊರಕೆ ಹೊಡೆದ ವರ | ನಿದ್ದೆಯಿಂದ ಎಬ್ಬಿಸಲು ಹೋದ ಕುಟುಂಬಸ್ಥರು ಸುಸ್ತು!

 

ಇತ್ತೀಚಿನ ಸುದ್ದಿ