ಏನಿದು ನಳಿನ್ ಕುಮಾರ್ ಆಡಿಯೋ ರಹಸ್ಯ? | ನಿನ್ನೆಯಿಂದ ನಡೆದ ಬೆಳವಣಿಗೆ ಏನು?
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾಗಿರುವ ಆಡಿಯೋವೊಂದು ವೈರಲ್ ಆಗಿದ್ದು, ಈ ಆಡಿಯೋದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾತ್ರವಲ್ಲದೇ ಜಗದೀಶ್ ಶೆಟ್ಟರ್, ಈಶ್ವರಪ್ಪ ಸೇರಿದಂತೆ ಹಲವು ನಾಯಕರನ್ನು ಕೈಬಿಟ್ಟು ಹೊಸ ತಂಡ ಕಟ್ಟುವ ಸಂದೇಶವನ್ನು ಹೈಕಮಾಂಡ್ ನೀಡಿದ್ದಾರೆ ಎನ್ನುವ ಮಾತುಗಳು ಈ ಆಡಿಯೋದಲ್ಲಿ ದಾಖಲಾಗಿದೆ.
ಇನ್ನೂ ಈ ಆಡಿಯೋ ವೈರಲ್ ಆದ ಬೆನ್ನಿಗೆ ನಳಿನ್ ಕುಮಾರ್ ಕಟೀಲ್ ಸ್ಪಷ್ಟನೆ ನೀಡಿದ್ದು, ಈ ಆಡಿಯೋ ನಕಲಿಯಾಗಿದೆ. ಇದರ ಮೂಲಕ ಕಳಂಕ ತರುವ ಪ್ರಯತ್ನವಾಗಿದೆ. ನನ್ನ ಧ್ವನಿಯನ್ನು ಅನುಕರಿಸಿ, ಆಡಿಯೋವನ್ನು ಯಾರೋ ಕಿಡಿಗೇಡಿಗಳು ವಾಟ್ಸಾಪ್ ನಲ್ಲಿ ಹರಿಯಬಿಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ತುಳು ಭಾಷೆಯಲ್ಲಿರುವ ಈ ಆಡಿಯೋದಲ್ಲಿ, ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾಗಿರುವ ಧ್ವನಿಯು, ಯಾರಿಗೂ ಹೇಳಲು ಹೋಗಬೇಡಿ, ಈಶ್ವರಪ್ಪ, ಜಗದೀಶ್ ಶೆಟ್ಟರ್… ಆ ತಂಡವನ್ನೇ ತೆಗೆಯುತ್ತೇವೆ. ಎಲ್ಲ ಹೊಸ ತಂಡ ಮಾಡುತ್ತೇವೆ. ಈಗ ಸದ್ಯಕ್ಕೆ ಯಾರಿಗೂ ಕೊಡಬೇಡಿ ಎಂದಿದ್ದಾರೆ. ಯಾರಿಗೂ ಹೆದರಬೇಡಿ. ಯಾರಾದರೂ ಸರಿ ಇನ್ನು ನಮ್ಮ ಕೈಯಲ್ಲೇ ಎಲ್ಲ. ಮೂರು ಹೆಸರುಗಳಿವೆ ಅದರಲ್ಲಿ ಯಾವುದಾದರೂ ಒಂದು ಆಗುವ ಸಾಧ್ಯತೆಗಳಿವೆ. ಇಲ್ಲಿಂದ ಯಾರನ್ನೂ ಮಾಡುವುದಿಲ್ಲ, ದೆಹಲಿಯಿಂದ ಮಾಡುತ್ತಾರೆ ಎನ್ನುವ ಸಂಭಾಷಣೆ ಇದೆ.
ಇನ್ನೂ ಈ ಆಡಿಯೋ ಬಿಡುಗಡೆಯಾದ ಬೆನ್ನಲ್ಲೇ ಕೆ.ಎಸ್.ಈಶ್ವರಪ್ಪ ಕೂಡ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ್ದು, ನಳಿನ್ ಕುಮಾರ್ ಹಾಗೆ ಹೇಳೋದಕ್ಕೆ ಸಾಧ್ಯವೇ ಇಲ್ಲ. ಅವರು ಹಾಗೆ ಮಾತನಾಡುವುದೇ ಇಲ್ಲ. ಅದು ನಕಲಿಯೋ ಅಸಲಿಯೋ ಎಂದು ತನಿಖೆಯಾಗಬೇಕು. ನಾನಂತೂ ಮಂತ್ರಿ ಸ್ಥಾನಕ್ಕೆ ಗೂಟ ಹೊಡೆದುಕೊಂಡು ಕೂತಿಲ್ಲ. ಸಚಿವ ಸ್ಥಾನ ಹೋದರೆ ಹೋಗಲಿ. ಸಂಘಟನೆಯ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.
ನಾನು ಅದನ್ನು ಹೇಳಿಲ್ಲ, ಯಾರೋ ಹುಚ್ಚರು ಇದನ್ನು ಮಾಡಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಅವರ ಹೇಳಿಕೆಗೆ ನನ್ನ ಸಂಪೂರ್ಣ ಸಹಮತ ಇದೆ. ಅದೊಂದು ನಕಲಿ ಆಡಿಯೋ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ ಬಳಿಕ ತನಿಖೆ ಮಾಡುವುದೇನೂ ಉಳಿದಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.
ಇನ್ನಷ್ಟು ಸುದ್ದಿಗಳು:
2 ಗಂಟೆಗಳಲ್ಲಿ 15 ಮಂದಿಗೆ ಕಚ್ಚಿದ ಹುಚ್ಚುನಾಯಿ | ಬೀದಿ ನಾಯಿಗಳ ಕಾಟದಿಂದ ರೋಸಿ ಹೋದ ಜನರು
ದಲಿತ ಯುವಕನ ಕುದುರೆ ಸವಾರಿಗೆ ಅಡ್ಡಿಪಡಿಸಿದ 9 ಮಂದಿಗೆ 5 ವರ್ಷ ಜೈಲೂಟ | ದೌರ್ಜನ್ಯದ ವಿರುದ್ಧ ದೊರಕಿತು ನ್ಯಾಯ
ಅಯೋಧ್ಯೆಯಲ್ಲಿ ಬ್ರಾಹ್ಮಣರ ಸಮ್ಮೇಳನ ಆಯೋಜಿಸಿದ ಬಿಎಸ್ ಪಿ!
ಸ್ನಾನ ಮಾಡುತ್ತಿದ್ದಾಗ ಮೊಬೈಲ್ ನಲ್ಲಿ ಚಿತ್ರೀಕರಣ: ಯುವತಿ ಕಿರುಚಿದಾಗ ಆರೋಪಿ ಪರಾರಿ
ದೇಶ ಹಾಳು ಮಾಡಿದವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ | ನಾಲಿಗೆ ಹರಿಯಬಿಟ್ಟ ನಾರಾಯಣಾಚಾರ್ಯ!
ಸೆಲ್ಫಿ ತೆಗೆಯುವ ವೇಳೆ ಭಾರೀ ಆಳದ ಜಲಪಾತಕ್ಕೆ ಬಿದ್ದ ಇನ್ಸ್ ಸ್ಟಾ ಸೆಲೆಬ್ರೆಟಿ